Advertisement

Bantwal: ಅಪರೂಪದ ಉಡಾ ಬೇಟೆಯಾಡಿ ಫೋಟೋಗೆ ಪೋಸ್‌ ಕೊಟ್ಟ ವ್ಯಕ್ತಿ; ದೂರು ದಾಖಲು

12:16 PM Oct 15, 2023 | Team Udayavani |

ಬಂಟ್ವಾಳ: ಭಾರತದ ಅಪರೂಪದ ವನ್ಯ ಜೀವಿಗಳಲ್ಲಿ ಒಂದಾದ ಉಡಾ(indian monitor lizard) ವನ್ನು ವ್ಯಕ್ತಿಯೋರ್ವ ಬೇಟೆಯಾಡಿ ಬಳಿಕ ಅದನ್ನು ಫೋಟೊಗಳಿಗೆ ಪೋಸ್ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ವಗ್ಗದಲ್ಲಿ ಬೆಳಕಿಗೆ ಬಂದಿದೆ.

Advertisement

ಉಡಾವನ್ನು ಸಾಯಿಸಿದ ವ್ಯಕ್ತಿಯನ್ನು ವಗ್ಗದ ಸುಧಾಕರ ಎಂದು ಗುರುತ್ತಿಸಲಾಗಿದ್ದು ಆತನ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆ 1972  ಅನ್ವಯ ಕೇಸ್ ದಾಖಲು ಮಾಡಿದ್ದಾರೆ. ಅಕ್ಟೋಬರ್ 11 ರಂದು ಘಟನೆ ಬೆಳಕಿಗೆ ಬಂದಿದ್ದು ಬೃಹತ್ ಗಾತ್ರದ ಉಡವನ್ನು ಹಿಂಸಾತ್ಮಕ ರೀತಿಯನ್ನು ಸಾಯಿಸಿ ಬಳಿಕ ಅದನ್ನು ತೆಗೆದುಕೊಂಡು ವಿಜ್ರಂಭಿಸುತ್ತಿದ್ದ ಎಂದು ಸ್ಥಳಿಯರು ಮಾಹಿತಿ ನೀಡಿದ್ದು ಜೊತೆಗೆ ಸಾಮಾಜಿಕ ಜಾಲಾ ತಾಣಗಳಲ್ಲಿ ಅದನ್ನು ಹರಿಯ ಬಿಟ್ಟಿದ್ದ.

ದೂರು ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದು, ಬಂಟ್ವಾಳ ವಲಯ ಅರಣ್ಯಾಧಿಕಾರಿಯವರು ಪ್ರಕರಣದ ತನಿಖೆ ನಡಸುತ್ತಿದ್ದಾರೆ. ಎಂದು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಂಥೋಣಿ ಎಸ್‌. ಮರಿಯಪ್ಪ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: KSRTC ಬಸ್ಸಿನೊಳಗೆ ಕೋಳಿ ಮಾಂಸ ತಂದ ಪ್ರಯಾಣಿಕ, ಬಸ್ ಸಮೇತ ಠಾಣೆಗೊಯ್ದ ಚಾಲಕ

ಉಡಾ ಸಾಯಿಸಿದ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿ ಸುಧಾಕರ್ ತಲೆ ಮರೆಸಿಕೊಂಡಿದ್ದಾನೆ.  ಆತ ಉಡಾ ಸಾಯಿಸಿ ಶೇರ್ ಮಾಡಿದ ಸಾಮಾಜಿಕ ಜಾಲಾತಾಣ ವಾಟ್ಸ್‌ಅಪ್ ಎಡ್ಮಿನ್ ನನ್ನು ವಿಚಾರಣೆ ಕರೆಸಿ ತನಿಖೆ ನಡಸಿದ್ದು ಆತನ ಸಿಡಿಆರ್‌ ಪರಿಶೀಲನೆ ನಡೆಸುತ್ತಿದ್ದು ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದಿದ್ದಾರೆ.

Advertisement

ಚರ್ಮಾ, ಮೂಳೆಗಳಿಗಾಗಿ ಬೇಟೆಗಾರರ ವಕ್ರ ದೃಷ್ಟಿಗೆ ಬಿದ್ದಿರುವ ಉಡಾ  ಅವನತಿಯ ಹಾದಿಯಲ್ಲಿದ್ದು ಇದನ್ನು (ಪ್ರವರ್ಗ A)ಯನ್ನುಅಳಿವಿನ ಅಂಚಿನಲ್ಲಿರುವ ಅಪರೂಪದ ಸರೀಸೃಪ ಎಂದು ಘೋಷಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next