Advertisement

ಏಶ್ಯಾಡ್‌: ಪೂವಮ್ಮ ಒಳಗೊಂಡ ಭಾರತದ ಬೆಳ್ಳಿಗೆ ಚಿನ್ನದ ಲೇಪ

02:47 AM Jul 24, 2020 | Hari Prasad |

ಹೊಸದಿಲ್ಲಿ: ಜಕಾರ್ತಾದಲ್ಲಿ ನಡೆದ 2018ರ ಏಶ್ಯಾಡ್‌ ಕೂಟದ 4×400 ಮೀ. ಮಿಕ್ಸೆಡ್‌ ರಿಲೇಯಲ್ಲಿ ಭಾರತ ಗೆದ್ದ ಬೆಳ್ಳಿ ಪದಕವೀಗ ಚಿನ್ನವಾಗಿ ಪರಿವರ್ತನೆಗೊಂಡಿದೆ.

Advertisement

ಅಂದು ಚಿನ್ನ ಗೆದ್ದ ಬಹ್ರೈನ್‌ ತಂಡದ ಓರ್ವ ಆ್ಯತ್ಲೀಟ್‌ ಉದ್ದೀಪನ ಪದಾರ್ಥ ಸೇವಿಸಿದ್ದು ಖಚಿತಗೊಂಡಿದ್ದು, ತಂಡವನ್ನು ಅನರ್ಹಗೊಳಿಸಲಾಗಿದೆ.

ದ್ವಿತೀಯ ಸ್ಥಾನಿಯಾಗಿದ್ದ ಭಾರತವೀಗ ಅಗ್ರ ಸ್ಥಾನಕ್ಕೆ ನೆಗೆದು ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದೆ.

ಮೊಹಮ್ಮದ್‌ ಅನಾಸ್‌, ಎಂ.ಆರ್‌. ಪೂವಮ್ಮ, ಹಿಮಾ ದಾಸ್‌ ಮತ್ತು ಅರೋಕಿಯಾ ರಾಜೀವ್‌ ಅಂದಿನ ಬೆಳ್ಳಿ ವಿಜೇತ ಭಾರತ ತಂಡದಲ್ಲಿದ್ದರು. ಮಿಕ್ಸೆಡ್‌ ರಿಲೇ ಸ್ಪರ್ಧೆಯನ್ನು ಮೊದಲ ಸಲ ಏಶ್ಯಾಡ್‌ನ‌ಲ್ಲಿ ಅಳವಡಿಸಲಾಗಿತ್ತು.

ಅನು ರಾಘವನ್‌ಗೆ ಕಂಚು
ಇದೇ ವೇಳೆ ವನಿತೆಯರ 400 ಮೀ. ಹರ್ಡಲ್ಸ್‌ನಲ್ಲಿ 4ನೇ ಸ್ಥಾನ ಪಡೆದು ನಿರಾಶರಾಗಿದ್ದ ಅನು ರಾಘವನ್‌ ಅವರಿಗೆ ಕಂಚಿನ ಪದಕ ಒಲಿದು ಬಂದಿದೆ.

Advertisement

ಡೋಪಿಂಗ್‌ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ನೈಜೀರಿಯಾದ ಕೆಮಿ ಅಡೆಕೋಯಾ ಅವರಿಗೆ 4 ವರ್ಷ ನಿಷೇಧ ಹೇರಿದ ಕಾರಣ ಅವರ ಪದಕವನ್ನು ಹಿಂದಕ್ಕೆ ಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next