Advertisement

Plane crash in Zimbabwe: ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ ಆರು ಮಂದಿ ಮೃತ್ಯು

05:27 PM Oct 02, 2023 | Team Udayavani |

ಹರಾರೆ: ಖಾಸಗಿ ವಿಮಾನ ಪತನಗೊಂಡು ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ ಆರು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ನೈಋತ್ಯ ಜಿಂಬಾಬ್ವೆಯಲ್ಲಿ ನಡೆದಿರುವುದು ವರದಿಯಾಗಿದೆ.

Advertisement

ಚಿನ್ನ, ಕಲ್ಲಿದ್ದಲು ಮತ್ತು  ತಾಮ್ರವನ್ನು ಸಂಸ್ಕರಿಸುವ ರಿಯೋಜಿಮ್ ಗಣಿ ಕಂಪನಿಯ ಮಾಲೀಕ ಹರ್ಪಾಲ್ ರಾಂಧವಾ, ಅವರ ಮಗ ಮತ್ತು ಇತರ ನಾಲ್ವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ʼಪಿಟಿಐʼ ವರದಿ ತಿಳಿಸಿದೆ.

ರಿಯೊಜಿಮ್ ಒಡೆತನದ ಸೆಸ್ನಾ 206 ವಿಮಾನವು ಶುಕ್ರವಾರ(ಸೆ.29 ರಂದು) ಹರಾರೆಯಿಂದ ಜಿಂಬಾಬ್ಬೆಯ ಮುರೊವಾ ವಜ್ರದ ಗಣಿ ಕಡೆಗೆ ತೆರಳುತ್ತಿದ್ದಾಗ ಈ ದುರಂತ ಘಟನೆ ಸಂಭವಿಸಿದೆ ಎಂದು ಜಿಂಬಾಬ್ಬೆಯ ʼಐ ಹರಾರೆʼ ವರದಿ ಮಾಡಿದೆ.

ರಿಯೊಝಿಮ್‌ನ ಶೇರ್ ಒಡೆತನದಲ್ಲಿರುವ ಮುರೊವಾ ಡೈಮಂಡ್ಸ್ ಗಣಿ ಬಳಿ ಸಿಂಗಲ್ ಇಂಜಿನ್ ವಿಮಾನವು ಪತನಗೊಂಡಿದೆ. ಜ್ವಾಮಹಂಡೆ ಪ್ರದೇಶದಲ್ಲಿ ಪತನಗೊಂಡಿದೆ ಎಂದು ವರದಿ ತಿಳಿಸಿದೆ.

ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಹಾರಾಟ ನಡೆಸುತ್ತಿರುವಾಗಲೇ ಜ್ವಾಮಹಂಡೆ ಪ್ರದೇಶದ ಪೀಟರ್ ಫಾರ್ಮ್‌ ಹೋಗಿ ಬಿದ್ದಿದೆ. ಪರಿಣಾಮ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ಮೃತಪಟ್ಟವರಲ್ಲಿ ನಾಲ್ವರು ವಿದೇಶಿಗರು ಮತ್ತು ಇತರ ಇಬ್ಬರು ಜಿಂಬಾಬ್ವೆಯನ್ನರು ಎಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ದಿನಪತ್ರಿಕೆಯಾದ ಹೆರಾಲ್ಡ್ ವರದಿ ಮಾಡಿದೆ.

ಸೆ.29 ರ ಬೆಳಗ್ಗೆ 7:30 – 8 ಗಂಟೆ ನಡುವೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

“ಮುರೋವಾ ಡೈಮಂಡ್ ಕಂಪನಿ (ರಿಯೊಜಿಮ್) ಮಾಲೀಕತ್ವದ ವಿಮಾನವು ಹರಾರೆಯಿಂದ ಗಣಿ ಪ್ರದೇಶಕ್ಕೆ ಬೆಳಿಗ್ಗೆ 6 ಗಂಟೆಗೆ ಹೊರಟಿತು ಮತ್ತು ಮಶಾವಾದಿಂದ 6 ಕಿಮೀ ದೂರದಲ್ಲಿ ಅಪಘಾತಕ್ಕೀಡಾಯಿತು ಎಂದು ಅಪಘಾತದ ಬಗ್ಗೆ ರಿಯೊಜಿಮ್ ಅಧಿಕೃತವಾಗಿ ಹೇಳಿದೆ.

ಘಟನೆಯಲ್ಲಿ ಮೃತಪಟ್ಟವರ ಹೆಸರನ್ನು ಇನ್ನಷ್ಟೇ ಪೊಲೀಸರು ಬಹಿರಂಗ ಪಡಿಸಬೇಕಿದ್ದು, ಹರ್ಪಾಲ್ ರಾಂಧವಾ ಅವರ ಸ್ನೇಹಿತ ಹಾಗೂ ಚಲನಚಿತ್ರ ನಿರ್ಮಾಪಕ, ಪತ್ರಕರ್ತನಾಗಿರುವ ಹೋಪ್‌ವೆಲ್ ಚಿನೋನೊ ಅವರು ಹರ್ಪಾಲ್ ರಾಂಧವಾ ಅವರ ನಿಧನದ ಸುದ್ದಿ ಬಗ್ಗೆ ಅಧಿಕೃತವಾಗಿ ಟ್ವಿಟರ್‌ ನಲ್ಲಿ ಬರೆದುಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next