Advertisement

ಲಾಕ್ ಡೌನ್: ಊರಿಗೆ ಮರಳಲಾಗದೆ ದುಬೈನಲ್ಲೇ ಉಳಿದಿದ್ದ ಭಾರತದ ವ್ಯಕ್ತಿ ಸಾವು

09:12 AM Apr 12, 2020 | Nagendra Trasi |

ಯುಎಇ(ದುಬೈ):ಯುಎಇನಲ್ಲಿ ಇರುವ ಮಗಳನ್ನು ಭೇಟಿಯಾಗಲು ಭಾರತದಿಂದ ತೆರಳಿದ್ದ ನಿವೃತ್ತ ಪ್ರೊಫೆಸರ್ ಲಾಕ್ ಡೌನ್ ನಿಂದಾಗಿ ಭಾರತಕ್ಕೆ ವಾಪಸ್ ಆಗಲು ಸಾಧ್ಯವಾಗಿಲ್ಲವಾಗಿತ್ತು. ಇದೀಗ ಶನಿವಾರ ಪ್ರೊಫೆಸರ್ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

Advertisement

ಶಾರ್ಜಾದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಗಳು ಶ್ರೀಜಾಳನ್ನು ಭೇಟಿಯಾಗಲು ಕೇರಳದಿಂದ ಎಂ.ಶ್ರೀಕುಮಾರ್(70ವರ್ಷ) ಮತ್ತು ಪತ್ನಿ ಶ್ರೀಕುಮಾರಿ ದುಬೈಗೆ ತೆರಳಿದ್ದರು. ಅವರು ನಿಗದಿಯಂತೆ ಶನಿವಾರ ಕೇರಳಕ್ಕೆ ವಾಪಸ್ ಆಗಬೇಕಾಗಿತ್ತು. ಆದರೆ ಎಲ್ಲಾ ವಿಮಾನ ಸಂಚಾರ ರದ್ದುಗೊಳಿಸಿದ್ದರಿಂದ ಅವರಿಗೆ ದುಬೈನಿಂದ ಕೇರಳಕ್ಕೆ ವಾಪಸ್ ಆಗಲು ಸಾಧ್ಯವಾಗಿಲ್ಲವಾಗಿತ್ತು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಶ್ರೀಕುಮಾರ್ ಅವರು ಸಂಖ್ಯಾಶಾಸ್ತ್ರದ ಉಪನ್ಯಾಸಕರಾಗಿದ್ದರು. ಕೇರಳದ ಎರ್ನಾಕುಳಂನ ಮಹಾರಾಜ್ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಗುರುವಾರ ಎದೆನೋವು ಎಂದು ಹೇಳಿದ್ದರಿಂದ ಶಾರ್ಜಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next