ಟೊಯೊಟಾ, ವೊಕ್ಸ್‌ವ್ಯಾಗನ್, ಹ್ಯುಂಡೈ, ಮಹೀಂದ್ರಾ, ಟಾಟಾ ಮೋಟಾರ್ಸ್, ಹೋಂಡಾ ಮತ್ತು ಸ್ಕೋಡಾ ಕಂಪೆನಿಯ ಕಾರುಗಳ ರಫ್ತು 2023ರಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಕಾರು ಮಾರುಕಟ್ಟೆಯ ದಿಗ್ಗಜ ಮಾರುತಿ ಸುಜುಕಿ ಕಳೆದ ವರ್ಷ ಬರೋಬ್ಬರಿ 2,61,700 ಪ್ರಯಾಣಿಕ ವಾಹನಗಳನ್ನು ರಫ್ತು ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ.
Advertisement
2023ರಲ್ಲಿ ಭಾರತದಿಂದ ಒಟ್ಟು 6,71,384 ಕಾರುಗಳು ರಫ್ತಾಗಿದ್ದು, 2022ಕ್ಕೆ ಹೋಲಿಸಿದರೆ ಇದು ಶೇ. 4ರಷ್ಟು ಏರಿಕೆ ಕಂಡಿದೆ ಎಂದು ಜಾಟೋ ಡೈನಾಮಿಕ್ಸ್‌ನ ದತ್ತಾಂಶ ತಿಳಿಸಿದೆ. ಭಾರತದಿಂದ ರಫ್ತಾದ ಒಟ್ಟು ಕಾರುಗಳ ಪೈಕಿ ಶೇ. 40ರಷ್ಟು ಮಾರುತಿ ಸುಜುಕಿಯದ್ದು ಎಂದಿದೆ.
ಇದೇ ವೇಳೆ 2023ರ ಒಳಗಾಗಿ ದೇಶದಲ್ಲಿ ತಯಾರಾಗುವ ಪ್ರಯಾಣಿಕ ವಾಹನಗಳ ಪೈಕಿ ಶೇ. 50ರಷ್ಟು ರಫ್ತಾಗುವಂತೆ ಗುರಿ ಹಾಕಿಕೊಳ್ಳಿ ಎಂದು ಆಟೋಮೊಬೈಲ್ ಸಂಸ್ಥೆಗಳಿಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ಕರೆ ನೀಡಿದ್ದಾರೆ. ಬೇಡಿಕೆ ಹೆಚ್ಚಲು ಕಾರಣ?
– ಭಾರತದಲ್ಲಿ ಉತ್ಪಾದನೆ ವೆಚ್ಚ ಕಡಿಮೆ
– ಕೌಶಲಯುತ ಮಾನವ ಸಂಪನ್ಮೂಲ
– ಕಾರ್ಮಿಕ ವೆಚ್ಚವೂ ಕಡಿಮೆ
– ವಿಶ್ವ ದರ್ಜೆಯ ಪೂರೈಕೆದಾರರ ಲಭ್ಯತೆ
Related Articles
ಮಾರುತಿ ಸುಜುಕಿ 2,61,700 1
ಹ್ಯುಂಡೈ 1,64,950 11
ವೋಕ್ಸ್‌ವ್ಯಾಗನ್ 40,920 29
ಹೋಂಡಾ 25,527 9
ಟೊಯೊಟಾ 16,000 5.9
ಮಹೀಂದ್ರಾ 12,555 28
ಟಾಟಾ ಮೋಟಾರ್ಸ್ 2,194 57
ಸ್ಕೋಡಾ 1,530 431
Advertisement