ಬೆಂಗಳೂರಿನಲ್ಲಿ ಸ್ಟಾಂಡ್ ಅಪ್ ಕಾಮಿಡಿ ಶೋಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ನಗರದ ಒತ್ತಡದ ಜೀವನವನ್ನೇ ಸದುಪಯೋಗ ಪಡಿಸಿಕೊಳ್ಳುತ್ತಿರುವ ಈ ಕಾಮಿಡಿ ಶೋಗಳು, ಪ್ರಸ್ತುತ ರಾಜಕೀಯ ಸನ್ನಿವೇಶಗಳನ್ನೂ ಹಾಸ್ಯದ ಹಾದಿಗೆ ಎಳೆದು ತರುತ್ತಿವೆ.
ಈಗ ಬ್ಲೂ ಫ್ರಾಗ್ ಸಂಸ್ಥೆ “ಭಾರತೀಯ ಜೋಕ್ಸ್ ಪಾರ್ಟಿ’ ಎಂಬ ಹೆಸರಿನ ಶೋವನ್ನು ಆಯೋಜಿಸಿದೆ. ಕರ್ನಾಟಕ, ಪಂಜಾಬ್, ಗುಜರಾತ್ನ ಹೆಸರಾಂತ ಕಲಾವಿದರು ಇದರಲ್ಲಿ ಪಾಲ್ಗೊಂಡು, ಇಡೀ ದೇಶದ ರಾಜಕೀಯವನ್ನು ಹಾಸ್ಯದ ದುರ್ಬೀನಿನಲ್ಲಿ ನೋಡುವಂತೆ ಮಾಡಲಿದ್ದಾರೆ.
ಸ್ಟಾಂಡ್ಅಪ್ ಕಾಮಿಡಿಯಲ್ಲಿ ಪರಿಣತರೆಂದೇ ಪರಿಗಣಿಸಲ್ಪಟ್ಟ ನೀಲಾಕ್ ಮಾತೂರ್, ಸತೀಶ್ ಪೆರುಮಾಳ್, ಹರ್ಮನ್ ಪ್ರೀತ್ ಸಿಂಗ್, ಆಕಾಶ್ ಮೆಹ್ತಾ ಮತ್ತಿತರರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಎಲ್ಲಿ?: ಬ್ಲೂ ಫ್ರಾಗ್, ಚರ್ಚ್ ಸ್ಟ್ರೀಟ್
ಯಾವಾಗ?: ಡಿ.17, ಭಾನುವಾರ, ರಾ.8
ಪ್ರವೇಶ: 249 ರೂ.