Advertisement
ಈ ಬಗ್ಗೆ ತನ್ನ ಪ್ರಕಟಣೆಯನ್ನು ಹೊರಡಿಸಿದ ‘ಕೂ’ 30 ಮಿಲಿಯನ್ ಡಾಲರ್ ನಷ್ಟು ಹೂಡಿಕೆ ಬಂದಿದೆ ಎಂದು ತಿಳಿಸಿದೆ.
Related Articles
Advertisement
ಕಳೆದ ಮಾರ್ಚ್ ತಿಂಗಳಲ್ಲಿ ‘ಕೂ’ ಆ್ಯಪ್ ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಬುಕ್ ಮೈ ಶೋ ಸ್ಥಾಪಕ ಆಶೀಶ್ ಹೇಮ ರಂಜನಿ, ಉಡಾನ್ ನ ಸಹ ಸಂಸ್ಥಾಪಕ ಸುಜೀತ್ ಕುಮಾರ್, ಫ್ಲಿಪ್ ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ, ಝಿರೋದಾ ಸ್ಥಾಪಕ ನಿಖಿಲ್ ಕಾಮತ್ ಚೀನಾದ ಶುನ್ವೈ ಕ್ಯಾಪಿಟಲ್ ನ ಶೇ.9 ರಷ್ಟು ಪಾಲನ್ನು ಹೂಡಿಕೆ ಮೂಲಕ ಖರೀದಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ‘ಕೂ’ ಸಾಮಾಜಿಕ ಜಾಲತಾಣದ ಸಹ ಸಂಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ, ಕೆಲವು ವರ್ಷಗಳಲ್ಲಿ ‘ಕೂ’ ಜಾಗತಿಕವಾಗಿ ಬೆಳೆಯುವ ಗುರಿಯನ್ನು ಹೊಂದಿದೆ. ಟೈಗರ್ ಗ್ಲೋಬಲ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ‘ಕೂ’ ಸಂಸ್ಥೆ ಬೆಳೆಯಲು ಮತ್ತು ‘ಕೂ’ ನ ಎಲ್ಲಾ ಯೋಜನೆಗಳಿಗೆ ಸೂಕ್ತವಾದ ಪಾಲುದಾರ ಸಂಸ್ಥೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕೇಂದ್ರದಿಂದ ರಾಜ್ಯಕ್ಕೆ 1200 ಮೆಟ್ರಿಕ್ ಟನ್ ದ್ರವೀಕೃತ ಆಮ್ಲಜನಕ ಹಂಚಿಕೆ: ಶೆಟ್ಟರ್