Advertisement

ಐಪಿಎಲ್ ನಲ್ಲಿ ಅನ್ ಸೋಲ್ಡ್: ಢಾಕಾ ಪ್ರೀಮಿಯರ್ ಲೀಗ್ ನತ್ತ ಮುಖಮಾಡಿದ ಭಾರತೀಯ ಆಟಗಾರರು!

04:12 PM Mar 15, 2022 | Team Udayavani |

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಬಿಕರಿಯಾಗದ ಹಲವು ಆಟಗಾರರು ಢಾಕಾ ಪ್ರೀಮಿಯರ್ ಲೀಗ್ ನತ್ತ ಮುಖ ಮಾಡಿದ್ದಾರೆ. ಹನುಮ ವಿಹಾರಿ, ಬಾಬಾ ಅಪರಿಜಿತ್, ಅಭಿಮನ್ಯು ಈಶ್ವರನ್ ಸೇರಿದಂತೆ ಹಲವು ಆಟಗಾರರು ಡಿಪಿಎಲ್ 2022ರಲ್ಲಿ ಆಡುವುದು ಖಚಿತವಾಗಿದೆ.

Advertisement

ಹನುಮ ವಿಹಾರಿ, ಬಾಬಾ ಅಪರಾಜಿತ್, ಅಭಿಮನ್ಯು ಈಶ್ವರನ್ ಜೊತೆಗೆ ಪರ್ವೇಜ್ ರಸೂಲ್, ಅಶೋಕ್ ಮೆನೇರಿಯಾ, ಚಿರಾಗ್ ಜಾನಿ ಮತ್ತು ಗುರಿಂದರ್ ಸಿಂಗ್ ಢಾಕಾ ಪ್ರೀಮಿಯರ್ ಲೀಗ್ ನಲ್ಲಿ ಆಡಲಿದ್ದಾರೆ.

ಢಾಕಾ ಪ್ರೀಮಿಯರ್ ಲೀಗ್ ಕೂಟವು ಬಾಂಗ್ಲಾದೇಶದ ಲಿಸ್ಟ್ ಎ ಕ್ರಿಕೆಟ್ ಕೂಟವಾಗಿದೆ. 50 ಓವರ್ ಗಳ ಕೂಟದಲ್ಲಿ ಹತ್ತು ತಂಡಗಳು ಭಾಗವಹಿಸುತ್ತಿದ್ದು, ಪ್ರತಿ ತಂಡದಲ್ಲಿ ತಲಾ ಓರ್ವ ವಿದೇಶಿ ಆಟಗಾರ ಭಾಗವಹಿಸಬಹುದಾಗಿದೆ.

ವಿಹಾರಿ, ಈಶ್ವರನ್, ಅಪರಾಜಿತ್, ಮೆನಾರಿಯಾ ಮತ್ತು ರಸೂಲ್ ಅವರು ಇದೇ ಮೊದಲೇನು ಡಿಪಿಎಲ್ ಟೂರ್ನಮೆಂಟ್‌ಗೆ ಆಡುತ್ತಿ, ಈ ಮೊದಲು 2019-2020 ಋತುವಿನಲ್ಲಿ ಅವರು ಭಾಗವಹಿಸಿದ್ದರು. ದಿನೇಶ್ ಕಾರ್ತಿಕ್, ಮನೋಜ್ ತಿವಾರಿ, ಯೂಸುಫ್ ಪಠಾಣ್ ಕೂಡಾ ಈ ಹಿಂದೆ ಈ ಕೂಟದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:ಗೋವಾ ಕಡಲತಡಿಯಲಿ ‘ಓ ಮೈ ಲವ್‌’ ಟಪ್ಪಾಂಗುಚಿ ಸಾಂಗ್‌

Advertisement

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಭಾಗವಾಗಿದ್ದ ಹನುಮ ವಿಹಾರಿ ಅವರು ಕೂಟದ ಮೊದಲ ಕೆಲವು ಪಂದ್ಯಗಳಿಗೆ ಅಲಭ್ಯರಾಗುತ್ತಾರೆ ಎಂದು ವರದಿ ತಿಳಿಸಿದೆ. ಟೆಸ್ಟ್ ಸರಣಿ ಮುಗಿಸಿರುವ ವಿಹಾರಿ ಹೈದರಾಬಾದ್ ಗೆ ತೆರಳಿದ್ದು, ಕುಟುಂಬದೊಂದಿಗೆ ಕೆಲ ದಿನ ಕಾಲ ಕಳೆದು ನಂತರ ಢಾಕಾಗೆ ಪ್ರಯಾಣ ಬೆಳೆಸಲಿದ್ದಾರೆ.

ಭಾರತೀಯ ಆಟಗಾರರ ಜೊತೆಗೆ ಪಾಕಿಸ್ಥಾನದ ಮಾಜಿ ಆಲ್ ರೌಂಡರ್ ಮೊಹಮ್ಮದ್ ಹಫೀಜ್, ಜಿಂಬಾಬ್ವೆಯ ಸಿಕಂದರ್ ರಾಜಾ ಕೂಡಾ ಢಾಕಾ ಪ್ರೀಮಿಯರ್ ಲೀಗ್ ನಲ್ಲಿ ಆಡಲಿದ್ದಾರೆ.

ಎರಡು ತಿಂಗಳ ಐಪಿಎಲ್ ಕಾಲದಲ್ಲಿ ಭಾರತದಲ್ಲಿ ಯಾವುದೇ ಇತರ ದೇಶೀಯ ಪಂದ್ಯಗಳು ನಡೆಯದ ಕಾರಣ ವಿದೇಶಿ ಕ್ಲಬ್ ಗಳಲ್ಲಿ ಅವಕಾಶವಿದೆ. ಚೇತೇಶ್ವರ ಪೂಜಾರ ಅವರು ಇಂಗ್ಲೀಷ್ ಕೌಂಟಿಯಲ್ಲಿ ಸಸೆಕ್ಸ್ ಕ್ಲಬ್ ಪರವಾಗಿ ಆಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next