Advertisement

ವಿಜ್ಞಾನದಿಂದ ಸಮಾಜ ನಿರ್ಮಾಣ

12:39 PM Oct 07, 2021 | Team Udayavani |

ಬೆಂಗಳೂರು: “ಜಾಗತಿಕ ಮಹಾಮಾರಿ ಕೋವಿಡ್‌ ನಂತರ ಹೊಸ ಜಗತ್ತು ತೆರೆದುಕೊಂಡಿದೆ. ಇದರಲ್ಲಿ ಅವಕಾಶಗಳು ಮತ್ತು ಸವಾಲುಗಳು ಎರಡೂ ಇವೆ. ಇವುಗಳ ಸ್ಪರ್ಧೆಯಲ್ಲಿ ಯಾರೊಬ್ಬರೂ ವಂಚಿತರಾಗದಂತೆ, ವಿಜ್ಞಾನದ ಸೇತುವೆ ಮೂಲಕ ಸಮ ಸಮಾಜ ನಿರ್ಮಿಸುವ ಜವಾಬ್ದಾರಿ ಸಂಶೋಧನಾ ಸಂಸ್ಥೆಗಳ ಮೇಲಿದೆ’ ಎಂದು ಕೊಟ್ಯಾಕ್‌ ಮಹಿಂದ್ರ ಬ್ಯಾಂಕ್‌ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಉದಯ್‌ ಕೊಟ್ಯಾಕ್‌ ತಿಳಿಸಿದರು.

Advertisement

ಬುಧವಾರ ವರ್ಚ್ಯು ವಲ್‌ ಆಗಿ ಆಯೋಜಿಸಿದ್ದ ಭಾರತೀಯ ಸಂಶೋಧನಾ ಸಂಸ್ಥೆ (ಐಐಎಸ್ಸಿ)ಯ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದರು. ಕೋವಿಡ್‌ ನಂತರದ ಈ ಹೊಸ ಜಗತ್ತು ವಿಪುಲ ಅವಕಾಶಗಳನ್ನು ಸೃಷ್ಟಿಸಿದೆ. ತಂತ್ರಜ್ಞಾನಗಳ ಆವಿಷ್ಕಾರಗಳು, ಸಂಪರ್ಕ ಸಾಧನಗಳು ಸೇರಿದಂತೆ ವಿವಿಧ ಹಂತದಲ್ಲಿ ಇದನ್ನು ಕಾಣಬಹುದು. ಬೆನ್ನಲ್ಲೇ ಅತಿ ವೇಗವಾಗಿ ಸಾಗುತ್ತಿರುವ ತಂತ್ರಜ್ಞಾನಗಳು ಹಾಗೂ ಅದಕ್ಕೆ ತಕ್ಕಂತೆ ಬದಲಾದ ಕೌಶಲ್ಯಗಳು ಹಲವು ಸವಾಲುಗಳನ್ನೂ ಮುಂದಿಟ್ಟಿದೆ. ಇದು ಉಳ್ಳವರು ಮತ್ತು ಇಲ್ಲದವರು ಎಂಬ ಎರಡುಗುಂಪುಗಳ ಸೃಷ್ಟಿಗೆ ಕಾರಣವಾಗಿದೆ ಎಂದರು.

ಇದನ್ನೂ ಓದಿ:- ವಿದೇಶದಲ್ಲೂ ಕನ್ನಡ ಕೈಂಕರ್ಯ: ಗಲ್ಫ್ ನಲ್ಲಿ ಅತೀ ದೊಡ್ಡ ಕನ್ನಡ ಪಾಠಶಾಲೆ !

ಆದ್ದರಿಂದ ಇದನ್ನು “ವಿಜ್ಞಾನದ ಸೇತುವೆ’ ಮೂಲಕ ಇದನ್ನು ಸರಿದೂಗಿಸಿ, ಸಮ ಸಮಾಜ ನಿರ್ಮಾಣದ ಹೊಣೆ ನಮ್ಮೆಲ್ಲರ ಮೇಲಿದೆ. ಅದರಲ್ಲೂ ವಿಶೇಷವಾಗಿ ಈ ಹೊಸ ಭವಿಷ್ಯ ನಿರ್ಮಾಣದ ನಾಯಕತ್ವವನ್ನು ಐಐಎಸ್ಸಿಯಂತಹ ಸಂಶೋಧನಾ ಸಂಸ್ಥೆಗಳು ವಹಿಸಿಕೊಳ್ಳಬೇಕು ಎಂದು ಉದಯ್‌ ಕೊಟ್ಯಾಕ್‌ ಅಭಿಪ್ರಾಯಪಟ್ಟರು.

ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆ ಆಗಲಿ’: ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್‌. ಕಿರಣ್‌ ಕುಮಾರ್‌ ಮಾತನಾಡಿ, ಕೋವಿಡ್‌ನ‌ಂತಹ ಸಾಂಕ್ರಾಮಿಕ ರೋಗಗಳ ಹಾವಳಿ ಸಂದರ್ಭದಲ್ಲಿ ಆರೋಗ್ಯ ಕಾಳಜಿ ಪ್ರಮುಖ ಸವಾಲು ಆಗಿದೆ. ಇದರಿಂದ ಹೊರಬರುವ ನಿಟ್ಟಿ ನಲ್ಲಿ ಐಐಎಸ್ಸಿ ಸಂಶೋಧನೆಗಳು ಆಗಬೇಕು ಎಂದರು. ಐಐಎಸ್ಸಿ ನಿರ್ದೇಶಕ ಜಿ. ರಂಗರಾಜನ್‌ ಮಾತನಾಡಿ, 2020ರ ಸೆಪ್ಟೆಂಬರ್‌ನಿಂದ 2021ರ ಸೆಪ್ಟೆಂಬರ್‌ವರೆಗೆ ಒಟ್ಟಾರೆ 2,036 ಪದವಿಗಳನ್ನು ಪ್ರದಾನ ಮಾಡಲಾಗಿದೆ. ಪ್ರತಿ ವರ್ಷ ಸರಾಸರಿ 400 ವಿದ್ಯಾರ್ಥಿಗಳು ಪದವೀಧರರಾಗಿ ಹೊರಹೊಮ್ಮುತ್ತಿದ್ದಾರೆ.

Advertisement

ರಾಷ್ಟ್ರಮಟ್ಟದಲ್ಲಿ ವಿವಿ ಮತ್ತು ಸಂಶೋಧನಾ  ವಿಭಾಗ ಎರಡರಲ್ಲೂ ಐಐಎಸ್ಸಿ ಮೊದಲ ಸ್ಥಾನದಲ್ಲಿದೆ. ಏಷ್ಯಾ ಮಟ್ಟದಲ್ಲಿ 56, ವಿಶ್ವಮಟ್ಟದಲ್ಲಿ 185ನೇ ಸ್ಥಾನದಲ್ಲಿದೆ. 1,832 ಪಿಎಚ್‌ಡಿ ಮತ್ತು ಮಾಸ್ಟರ್‌ ಸ್ಟೂಡೆಂಟ್ಸ್‌, 204 ಪದವೀಧರರು, 110 ವಿದ್ಯಾರ್ಥಿಗಳಿಗೆ ಪದಕ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next