Advertisement

ಉತ್ಪಾದನಾ ಪ್ರಶಸ್ತ ರಾಷ್ಟ್ರಗಳ ಪೈಕಿ ಭಾರತಕ್ಕೆ 3ನೇ ಸ್ಥಾನ

01:47 PM Jul 19, 2020 | sudhir |

ಹೊಸದಿಲ್ಲಿ: ಕೋವಿಡ್ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಜಾಗತಿಕ ಉತ್ಪಾದನಾ ವಲಯಗಳಿಗೆ ಪ್ರಶಸ್ತವಾಗಿರುವ 48 ರಾಷ್ಟ್ರಗಳ ಪೈಕಿ ಭಾರತ 3ನೇ ಸ್ಥಾನ ಪಡೆದಿದೆ. ಚೀನ ಮೊದಲ ಸ್ಥಾನದಲ್ಲಿದ್ದು, 2ನೇ ಸ್ಥಾನ ಅಮೆರಿಕದ ಪಾಲಾಗಿದೆ ಎಂದು ಜಾಗತಿಕ ಉತ್ಪಾದನಾ ಅಪಾಯ ಸೂಚ್ಯಂಕ (ಎಂಆರ್‌ಐ) ವರದಿ ಹೇಳಿದೆ.

Advertisement

4ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ ಒಂದು ಸ್ಥಾನ ಏರಿಕೆ ಕಂಡಿದೆ. ಉತ್ಪಾದನಾ ವೆಚ್ಚ ಮತ್ತು ಕಾರ್ಯಾಚರಣೆ ವ್ಯವಸ್ಥೆಯ ಮಾನದಂಡಗಳನ್ನು ಆಧರಿಸಿ ರ್‍ಯಾಂಕ್‌ ಪಟ್ಟಿ ಸಿದ್ಧಪಡಿಸಲಾಗಿದೆ. ಯುರೋಪ್‌, ಅಮೆರಿಕ, ಏಷ್ಯಾ- ಪೆಸಿಫಿಕ್‌ ರಾಷ್ಟ್ರಗಳ ಪೈಕಿ ಭಾರತ ಅಗ್ರಪಂಕ್ತಿಯಲ್ಲಿ ನಿಂತಿರುವುದು ಕೊರೊನೋತ್ತರ ಆರ್ಥಿಕತೆಗೆ ಬಲ ಸಿಕ್ಕಂತಾಗಿದೆ. ಕೋವಿಡ್ ಬಿಕ್ಕಟ್ಟಿನ ಈ ಸನ್ನಿವೇಶದಲ್ಲಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿಸಲು ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ.

“ಜಾಗತಿಕ ಉತ್ಪಾದನೆಗೆ ಹೆಚ್ಚು ಸೂಕ್ತವಾದ ಸ್ಥಳಗಳಲ್ಲಿ ಭಾರತ ಅಗ್ರಪಂಕ್ತಿಯಲ್ಲಿ ನಿಂತಿರುವುದು ಆಶಾದಾಯಕ ಬೆಳವಣಿಗೆ’ ಎಂದು ಕುಶ್ಮನ್‌ ಆ್ಯಂಡ್‌ ವೇಕ್‌ಫೀಲ್ಡ್‌ನ ವ್ಯವಸ್ಥಾಪಕ ನಿರ್ದೇಶಕ ಅನ್ಸುಲ್‌ ಜೈನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೆಚ್ಚ ವಿಭಾಗದಲ್ಲೂ ಭಾರತ 3ನೇ ಸ್ಥಾನ ಪಡೆದಿದ್ದು, ಚೀನ ಮತ್ತು ವಿಯೆಟ್ನಾಂ ಮುಂಚೂಣಿಯಲ್ಲಿವೆ. ಕಾರ್ಮಿಕ ವೆಚ್ಚ, ನಿರ್ವಹಣ ವೆಚ್ಚಗಳು ಕಡಿಮೆ ಇರುವ ದೇಶಗಳನ್ನು ಮುಖ್ಯವಾಗಿ ಪರಿಗಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next