ನವದೆಹಲಿ: ಇಂಡಿಯನ್ ಐಡಲ್ ನ 12ನೇ ಆವೃತ್ತಿಯ ರಿಯಾಲಿಟಿ ಶೋನ ವಿನ್ನರ್ ಪವನ್ ದೀಪ್ ರಾಜನ್ ಅವರನ್ನು ಉತ್ತರಾಖಂಡ್ ನ ಕಲೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಬುಧವಾರ(ಆಗಸ್ಟ್ 25) ಘೋಷಿಸಿದ್ದಾರೆ.
ಇದನ್ನೂ ಓದಿ:ಮೈಸೂರು: ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರ
ಪವನ್ ದೀಪ್ ರಾಜನ್ ಇಂದು ಮುಖ್ಯಮಂತ್ರಿ ಪುಷ್ಕರ್ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ನಂತರ ಈ ಘೋಷಣೆ ಹೊರಬಿದ್ದಿರುವುದಾಗಿ ವರದಿ ತಿಳಿಸಿದೆ. ತಮ್ಮ ವಿನಮ್ರತೆಯ ಹಿನ್ನೆಲೆಯ ಹೊರತಾಗಿಯೂ ಪವನ್ ದೀಪ್ ಪ್ರತಿಭೆಯ ಮೂಲಕ ಸಂಗೀತ ಜಗತ್ತಿನಲ್ಲಿ ಛಾಪನ್ನು ಮೂಡಿಸಿದ್ದಾರೆ. ಈ ಮೂಲಕ ಉತ್ತರಾಖಂಡ್ ದೇಶ ಹಾಗೂ ವಿದೇಶಗಳಲ್ಲಿ ಪ್ರಸಿದ್ದಿಯಾಗುವಂತೆ ಮಾಡಿರುವುದಾಗಿ ಸಿಎಂ ಧಾಮಿ ಶ್ಲಾಘಿಸಿದ್ದಾರೆ.
23 ವರ್ಷದ ಪವನ್ ದೀಪ್ ರಾಜನ್ ಇಂಡಿಯನ್ ಐಡಲ್ ಸಂಗೀತ ರಿಯಾಲಿಟಿ ಶೋನ 12ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಯಲ್ಲಿ ಟ್ರೋಫಿಯನ್ನು ಜಯಿಸುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದರು. ಪವನ್ ದೀಪ್ ರಾಜನ್ ಅವರು ಉತ್ತರಾಖಂಡ್ ನ ಕುಮಾನ್ ಪ್ರದೇಶದ ಚಂಪಾವತ್ ನಿವಾಸಿಯಾಗಿದ್ದಾರೆ.
ಇಂಡಿಯನ್ ಐಡಲ್ ನ 12ನೇ ಆವೃತ್ತಿಯಲ್ಲಿ ಜಯಶಾಲಿಯಾಗಿದ್ದ ಪವನ್ ದೀಪ್ ರಾಜನ್ ಗೆ ಟ್ರೋಫಿ ಜೊತೆಗೆ 12 ಲಕ್ಷ ರೂಪಾಯಿ ಮತ್ತು ಒಂದು ಕಾರನ್ನು ನೀಡಲಾಗಿತ್ತು. ಇಂಡಿಯನ್ ಐಡಲ್ ನ 12ನೇ ಆವೃತ್ತಿಯಲ್ಲಿ ಅನು ಮಲಿಕ್, ರೇಷ್ಮಾನಿಯಾ ಮತ್ತು ಸೋನು ಕಕ್ಕರ್, ದದ್ಲಾನಿ ತೀರ್ಪುಗಾರರಾಗಿದ್ದರು.