ನವದೆಹಲಿ: ದೇಶೀಯ ಗೋಧಿ ದರದಲ್ಲಿ ಗಣನೀಯ ಏರಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಮೈದಾ, ರವೆ ಮತ್ತು ಎಲ್ಲ ಬಗೆಯ ಗೋಧಿ ಹಿಟ್ಟುಗಳ ರಫ್ತಿನ ಮೇಲೆ ನಿರ್ಬಂಧ ಹೇರಿದೆ. ಆ.14ರಿಂದಲೇ ಈ ರಫ್ತು ನಿರ್ಬಂಧ ಚಾಲ್ತಿಗೆ ಬರಲಿದೆ.
ಗೋಧಿ ರಫ್ತಿಗೆ ಸಂಬಂಧಿಸಿದ ಅಂತರ್ ಸಚಿವಾಲಯ ಸಮಿತಿಯ ಒಪ್ಪಿಗೆ ಪಡೆದರಷ್ಟೇ ಇವುಗಳ ರಫ್ತಿಗೆ ಅವಕಾಶ ಸಿಗಲಿದೆ ಎಂದು ವಿದೇಶ ವ್ಯಾಪಾರ ಪ್ರಧಾನ ನಿರ್ದೇಶನಾಲಯ ಆದೇಶ ಹೊರಡಿಸಿದೆ.
ಕಳೆದ ತಿಂಗಳಷ್ಟೇ ಕೇಂದ್ರ ಸರ್ಕಾರವು ಜಾಗತಿಕ ಗೋಧಿ ಸರಬರಾಜಿನಲ್ಲಿ ತೊಡಕುಂಟಾದ ಕಾರಣ ಗೋಧಿ ಹಿಟ್ಟಿನ ರಫ¤ನ್ನು ನಿರ್ಬಂಧಿಸಿತ್ತು. ಕೇವಲ ಒಂದೂವರೆ ತಿಂಗಳಲ್ಲೇ ದೇಶದಲ್ಲಿ ಗೋಧಿ ದರ ಶೇ.14ರಷ್ಟು ಏರಿಕೆ ಕಂಡಿದೆ.
ಇದನ್ನೂ ಓದಿ:ಎಲ್ಲ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತ್ರಿವರ್ಣ ಧ್ವಜಗಳಿಗೆ ಬೇಡಿಕೆ 50 ಪಟ್ಟು ಹೆಚ್ಚಳ!
ಮೈದಾ, ಬಿಸ್ಕಿಟ್, ಹಿಟ್ಟು ಮತ್ತು ರವೆ ತಯಾರಿಸುವ ಮಿಲ್ಲರ್‌ಗಳಿಂದ ಹೆಚ್ಚಿನ ಬೇಡಿಕೆ ಕಂಡುಬಂದ ಹಿನ್ನೆಲೆಯಲ್ಲಿ ದರ ಏರಿಕೆಯಾಗಿತ್ತು. ಜೂನ್‌ನಲ್ಲಿ ಮಿಲ್‌ಗೆ ನೀಡಲಾಗುವ ಗೋಧಿಯ ದರ ಕ್ವಿಂಟಲ್‌ಗೆ 2,260-2,270 ರೂ. ಇದ್ದದ್ದು, ಇತ್ತೀಚಿನ ದಿನಗಳಲ್ಲಿ 2,300-2,350 ರೂ.ಗೆ ಏರಿಕೆಯಾಗಿದೆ.
ದೊಡ್ಡ ದೊಡ್ಡ ಕಂಪನಿಗಳು ಮತ್ತು ವ್ಯಾಪಾರಿಗಳು ಗೋಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನಿಟ್ಟು ದರ ಏರಿಕೆಗೆ ಕಾಯುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿದ್ದವು.