Advertisement

ನೆಲ್ಲಿಕಾಯಿ ವೈವಿಧ್ಯ

05:56 PM Oct 20, 2020 | |

ಸಿ’ ಜೀವಸತ್ವದ ಗಣಿಯಾಗಿರುವ ನೆಲ್ಲಿಕಾಯಿಯ ಸೇವನೆ ಮೆದುಳಿಗೆ  ಉತ್ತಮ ತ್ರಾಣಿಕದಂತೆ ಕೆಲಸ ಮಾಡುತ್ತದೆ. ಕೂದಲು ಉದುರುವಿಕೆ, ನೆಗಡಿ, ಉಬ್ಬಸ, ಕ್ಷಯ, ದೃಷ್ಟಿದೋಷ, ಆಮಶಂಕೆ, ಅಕಾಲಮುಪ್ಪು, ಮಧುಮೇಹ, ಬಾಲನೆರೆ- ಇತ್ಯಾದಿ ಹಲವಾರು ಸಮಸ್ಯೆಗಳಿಗೆ ನೆಲ್ಲಿಕಾಯಿಯ ಸೇವನೆಯಿಂದ ಬಹಳ ಪ್ರಯೋಜನ ಕಾಣಬಹುದು. ಇಲ್ಲಿವೆ ಕೆಲವು ರಿಸಿಪಿ.

Advertisement

ನೆಲ್ಲಿಕಾಯಿ ವಿದ್‌ ಖರ್ಜೂರ ಜ್ಯೂಸ್‌ 
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ- ನಾಲ್ಕು, ಖರ್ಜೂರ- ನಾಲ್ಕು, ಸಕ್ಕರೆ- ರುಚಿಗೆ ಬೇಕಷ್ಟು, ಜೇನುತುಪ್ಪ- ಎರಡು ಚಮಚ, ಏಲಕ್ಕಿಪುಡಿ ಚಿಟಿಕಿ.

ತಯಾರಿಸುವ ವಿಧಾನ: ನೆಲ್ಲಿಕಾಯಿಯ ಬೀಜ ತೆಗೆದು ಮಿಕ್ಸಿಜಾರಿಗೆ ಹಾಕಿ. ಇದಕ್ಕೆ ಬೀಜ ತೆಗೆದ ಖರ್ಜೂರ ಮತ್ತು ಸಕ್ಕರೆ ಹಾಗೂ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ನಂತರ ಸ್ವಲ್ಪ ಐಸ್‌ಪೀಸ್‌ ಮತ್ತು ನೀರು ಸೇರಿಸಿ ಪುನಃ ರುಬ್ಬಿ ಸರ್ವಿಂಗ್‌ ಕಪ್‌ಗೆ ಹಾಕಿ. ಬೇಕಿದ್ದರೆ ಸೋಸಬಹುದು. ಜೇನುತುಪ್ಪ ಸೇರಿಸಿದ ಇದನ್ನು ಏಲಕ್ಕಿ ಮೇಲಿನಿಂದ ಹರಡಿ ಸರ್ವ್‌ ಮಾಡಬಹುದು. ಯಾವುದೇ ಕಾರಣದಿಂದ ರಕ್ತಸ್ರಾವವಾಗುತ್ತಿದ್ದರೆ, ಸುಸ್ತು, ಆಯಾಸದಿಂದ ತಲೆಸುತ್ತು ಇತ್ಯಾದಿ ತೊಂದರೆಯಿರುವವರಿಗೆ ಇದರ ಸೇವನೆಯಿಂದ ಬಹಳ ಉಪಯೋಗ.

ನೆಲ್ಲಿಕಾಯಿ ಸಲಾಡ್‌
ಬೇಕಾಗುವ ಸಾಮಗ್ರಿ:
ನೆಲ್ಲಿಕಾಯಿ ತುರಿ- ಎರಡು ಚಮಚ, ಹೆಚ್ಚಿದ ಸೇಬು- ಆರು ಚಮಚ, ಮೊಳಕೆ ಹೆಸರು- ನಾಲ್ಕು ಚಮಚ, ಸೌತೆಕಾಯಿ- ನಾಲ್ಕು ಚಮಚ, ಕ್ಯಾರೆಟ್‌ತುರಿ- ಎಂಟು ಚಮಚ, ಸಣ್ಣಗೆ ಹೆಚ್ಚಿದ ಖರ್ಜೂರ- ಮೂರು, ತೆಂಗಿನತುರಿ- ಮೂರು ಚಮಚ, ಚಾಟ್‌ ಮಸಾಲ – ಒಂದು ಚಮಚ, ಬೇಕಿದ್ದರೆ ಬ್ಲೇಕ್‌ಸಾಲ್ಟ್ – ರುಚಿಗೆ ಬೇಕಷ್ಟು, ಕಾಳುಮೆಣಸಿನ ಪುಡಿ- ಅರ್ಧ ಚಮಚ.

ತಯಾರಿಸುವ ವಿಧಾನ: ಮಿಕ್ಸಿಂಗ್‌ಬೌಲ್‌ಗೆ  ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಒಂದೊಂದಾಗಿ ಹಾಕಿ ಕೊನೆಗೆ ಉಪ್ಪು$ ಮತ್ತು ಬೇಕಿದ್ದರೆ ಕಾಳುಮೆಣಸಿನ ಪುಡಿ ಸೇರಿಸಿ ಮಿಶ್ರಮಾಡಿ ಸರ್ವ್‌ ಮಾಡಬಹುದು.

Advertisement

ಈ ಸಲಾಡ್‌ ಮಧುಮೇಹದವರಿಗೂ ಬಹಳ ಉತ್ತಮ. ಸೇಬಿನ ಬದಲು ಮೊಳಕೆ ಮೆಂತೆಯನ್ನೂ ಸೇರಿಸಬಹುದು. ಹಸಿವೆ ಆದಾಗ, ಸುಸ್ತು ಆದಾಗಲೂ ಸೇವಿಸಬಹುದು.

ಪಾಕದ ನೆಲ್ಲಿಕಾಯಿ
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ- ಹತ್ತು, ಬೆಲ್ಲದಪುಡಿ- ಸುಮಾರು ಎರಡು ಕಪ್‌, ಲವಂಗ- ನಾಲ್ಕು, ಕಾಳುಮೆಣಸು- ಹತ್ತು, ಏಲಕ್ಕಿ  ಸುವಾಸನೆಗಾಗಿ.

ತಯಾರಿಸುವ ವಿಧಾನ: ನೆಲ್ಲಿಕಾಯಿಯನ್ನು ಹಬೆಯಲ್ಲಿ ಬೇಯಿಸಿ ಬೀಜ ತೆಗೆದು ಇಟ್ಟುಕೊಳ್ಳಿ. ಬೆಲ್ಲಕ್ಕೆ ಸ್ವಲ್ಪ$ ನೀರು ಸೇರಿಸಿ ಪಾಕಕ್ಕೆ ಇಡಿ. ಪಾಕ ನೂಲುಪಾಕವಾಗುತ್ತಿದ್ದಂತೆ ಇದಕ್ಕೆ ಜಜ್ಜಿದ ಕಾಳುಮೆಣಸು, ಲವಂಗ, ಏಲಕ್ಕಿಪುಡಿ ಹಾಗೂ ಬೀಜ ತೆಗೆದ ನೆಲ್ಲಿಕಾಯಿಯನ್ನು ಸೇರಿಸಿ ಚೆನ್ನಾಗಿ ಕುದಿಸಿ ಒಲೆಯಿಂದ ಇಳಿಸಿ. ಆರಿದ ಮೇಲೆ ಬಾಟಲಿಯಲ್ಲಿ ಹಾಕಿಟ್ಟರೆ ಬಹಳ ಸಮಯ ಹಾಳಾಗದೇ ಉಳಿಯುತ್ತದೆ.
ಬಾಯಾರಿಕೆಯಾದಾಗ ಇದನ್ನು ಸೇವಿಸಿ ನೀರು ಕುಡಿಯಬಹುದು. ಉತ್ತಮ ತ್ರಾಣಿಕದಂತೆ ದೇಹಕ್ಕೆ ಚೈತನ್ಯ ತುಂಬಬಲ್ಲದು.

ಆಮ್ಲ ರೈಸ್‌
ಬೇಕಾಗುವ ಸಾಮಗ್ರಿ:
ನೆಲ್ಲಿಕಾಯಿ- ಆರು, ಹಸಿಮೆಣಸು- ನಾಲ್ಕು, ಶುಂಠಿ- ಅರ್ಧ ಇಂಚು, ಕೊತ್ತಂಬರಿಸೊಪ್ಪು ಸ್ವಲ್ಪ, ಬೆಳ್ಳುಳ್ಳಿ- ನಾಲ್ಕು ಎಸಳು, ತೆಂಗಿನ ತುರಿ- ಆರು ಚಮಚ, ಉದುರು ಉದುರಾಗಿ ಮಾಡಿದ ಬೆಳ್ತಿಗೆ ಅನ್ನ- ನಾಲ್ಕು ಕಪ್‌, ನೀರುಳ್ಳಿ – ಒಂದು, ಕ್ಯಾಪ್ಸಿಕಂ- ನಾಲ್ಕು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ತೆಂಗಿನ ತುರಿಗೆ ಹಸಿಮೆಣಸು, ಶುಂಠಿ, ಅರಸಿನ, ಕೊತ್ತಂಬರಿಸೊಪ್ಪು, ಬೀಜ ತೆಗೆದ ನೆಲ್ಲಿಕಾಯಿ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ರುಬ್ಬಿ ಚಟ್ನಿ ಮಾಡಿಟ್ಟುಕೊಳ್ಳಿ. ಬಾಣಲೆಗೆ ತುಪ್ಪಮತ್ತು ಸ್ವಲ್ಪಎಣ್ಣೆ ಹಾಕಿ ನೆಲಕಡ್ಲೆ, ನೀರುಳ್ಳಿ, ಬೆಳ್ಳುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು, ಅರಸಿನ, ಉದ್ದಿನಬೇಳೆ, ಕಡ್ಲೆಬೇಳೆ, ಜೀರಿಗೆ, ಕರಿಬೇವಿನ ಒಗ್ಗರಣೆ ಸಿಡಿಸಿ. ನಂತರ ಇದಕ್ಕೆ ಒಂದು ಚಮಚ ಸಾರಿನ ಪುಡಿ ಬೇಕಿದ್ದರೆ ಸೇರಿಸಬಹುದು. ಇದನ್ನು ಅನ್ನಕ್ಕೆ ಸೇರಿಸಿ ಮೊದಲೇ ರುಬ್ಬಿಟ್ಟ ಮಿಶ್ರಣ ಹಾಗೂ ಕೊತ್ತಂಬರಿಸೊಪ್ಪು$ ಇತ್ಯಾದಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿದರೆ ಆಮ್ಲರೈಸ್‌ ರೆೆಡಿ.
 
ಗೀತಸದಾ

Advertisement

Udayavani is now on Telegram. Click here to join our channel and stay updated with the latest news.

Next