Advertisement
ಮೈಕ್ರೋಸಾಫ್ಟ್ ನ ಅಜೂರ್ ಕ್ಲೌಡ್ ಸಿಸ್ಟಂ ನಲ್ಲಿನ ದೋಷವನ್ನು ಪತ್ತೆಹಚ್ಚಿದ್ದಕ್ಕಾಗಿ ಟೆಕ್ ದೈತ್ಯ ಸಂಸ್ಥೆ ಇಷ್ಟು ದೊಡ್ಡ ಮೊತ್ತವನ್ನು ಬಹುಮಾನವಾಗಿ ನೀಡಿದೆ.
Related Articles
Advertisement
ವಿಶೇಷವೆಂದರೆ, ಸುಮಾರು 2 ತಿಂಗಳ ಹಿಂದೆ ಅದಿತಿ ಮೈಕ್ರೋಸಾಫ್ಟ್ ಅಜೂರ್ ನಲ್ಲಿ ಆರ್ ಸಿ ಇ ದೋಷವನ್ನು ಪತ್ತೆ ಹಚ್ಚಿದ್ದರು. ಆದಾಗ್ಯೂ ಕಂಪನಿಗೆ ದೋಷದ ಬಗ್ಗೆ ತಿಳಿಸಿದ್ದರೂ ಕೂಡ ಕಂಪನಿಯು ವ್ಯವಸ್ಥೆಯ ಅಸುರಕ್ಷಿತ ಆವೃತ್ತಿಯನ್ನು ಯಾರಾದರೂ ಡೌನ್ ಲೋಡ್ ಮಾಡಿದ್ದಾರೆಯೇ ಎಂದು ಪರಿಶೀಲಿಸುವಲ್ಲಿ ನಿರತರಾಗಿದ್ದರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ದೊರಕಿರಲಿಲ್ಲ ಎಂದು ವರದಿಯಾಗಿದೆ.
ಆರ್ ಸಿ ಇ ದೋಷದ ಹಿಂದಿನ ಕಾರಣವನ್ನು ವಿವರಿಸಿದ ಅದಿತಿ, ಕೋಡ್ ನನ್ನು ನೇರವಾಗಿ ಬರೆಯುವ ಬದಲು ಡೆವಲಪರ್ ಗಳು ಮೊದಲು ‘ನೋಡ್ ಪ್ಯಾಕೇಜ್ ಮ್ಯಾನೇಜರ್’ ನನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. “ಡೆವಲಪರ್ ಗಳು ಎನ್ ಪಿ ಎಂ ಹೊಂದಿದ ನಂತರವೇ ಕೋಡ್ ಗಳನ್ನು ಬರೆಯಬೇಕು” ಎಂದು ಹೇಳಿದ್ದಾರೆ.
ಇನ್ನು, ಮೇಕ್ರೋಸಾಫ್ಟ್ ಹಾಗೂ ಪೇಸ್ ಬುಕ್ ಸಂಸ್ಥೆಗಳ ಮೆಚ್ಚಗೆಗೆ ಪಾತ್ರವಾಗಿದ್ದು ಮಾತ್ರವಲ್ಲದೇ, ಹಾರ್ವರ್ಡ್ ವಿಶ್ವವಿದ್ಯಾಲಯ, ಕೊಲಂಬಿಯಾ ವಿಶ್ವವಿದ್ಯಾಲಯ, ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಮೆಚ್ಚುಗೆಯ ಪತ್ರಗಳನ್ನು ಸಹ ಪಡೆದಿದ್ದಾರೆ. ಮಾತ್ರವಲ್ಲದೇ, ಗೂಗಲ್ ಹಾಲ್ ಆಫ್ ಫೇಮ್‌ನಲ್ಲಿ ಸಹ ಹೈಲೈಟ್ ಆಗಿದ್ದಾರೆ.
ಇದನ್ನೂ ಓದಿ : ಹೊರಗುತ್ತಿಗೆ ಸಿಬ್ಬಂದಿಗೆ ನಿಯಮಿತವಾಗಿ ವೇತನ ನೀಡದಿದ್ದರೆ ಶಿಸ್ತುಕ್ರಮ : ಸಚಿವ ಸುಧಾಕರ್