Advertisement

ಫ‌ುಟ್‌ಬಾಲ್‌ ರ್‍ಯಾಂಕಿಂಗ್‌ ಅಗ್ರ ನೂರರಲ್ಲಿ ಭಾರತ

10:00 AM Mar 16, 2018 | Karthik A |

ಹೊಸದಿಲ್ಲಿ: ಭಾರತೀಯ ಫ‌ುಟ್‌ಬಾಲ್‌ ತಂಡ ಮರಳಿ ಅಗ್ರ 100 ರ್‍ಯಾಂಕ್‌ನೊಳಗೆ ಗುರುತಿಸಿಕೊಂಡಿದೆ. ಗುರುವಾರ ಪ್ರಕಟಿಸಲಾದ ಫಿಫಾ ವರ್ಲ್ಡ್ ರ್‍ಯಾಂಕಿಂಗ್‌ನಲ್ಲಿ ಭಾರತ 99ನೇ ಸ್ಥಾನ ಪಡೆದುಕೊಂಡಿದೆ. ಈ ವರ್ಷ ಅಂತಾರಾಷ್ಟ್ರೀಯ ಪಂದ್ಯವನ್ನಾಡದ ಹೊರತಾಗಿಯೂ ಭಾರತ 3 ಸ್ಥಾನಗಳ ಜಿಗಿತ ಕಂಡಿದೆ. ಭಾರತ ಒಟ್ಟು 339 ಅಂಕಗಳನ್ನು ಹೊಂದಿದ್ದು, ಇಷ್ಟೇ ಅಂಕವನ್ನು ಗಳಿಸಿರುವ ಲಿಬಿಯಾ ಫ‌ುಟ್‌ಬಾಲ್‌ ತಂಡವೂ ಜಂಟಿ ಯಾಗಿ 99ನೇ ಸ್ಥಾನದಲ್ಲಿದೆ.

Advertisement

ಕಳೆದ ವರ್ಷ ಭಾರತ ಫ‌ುಟ್‌ಬಾಲ್‌ ತಂಡ 3 ಬಾರಿ 100ನೇ ರ್‍ಯಾಂಕ್‌ನೊಳಗೆ ಗುರುತಿಸಿಕೊಂಡ ಸಾಧನೆ ಮಾಡಿತ್ತು. ಕಳೆದ ಜುಲೈನಲ್ಲಿ 96ನೇ ಸ್ಥಾನದೊಂದಿಗೆ 2ನೇ ಅತ್ಯುತ್ತಮ ಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಇದನ್ನು ಹೊರತುಪಡಿಸಿದರೆ ಭಾರತದ ಅತ್ಯುತ್ತಮ ರ್‍ಯಾಂಕಿಂಗ್‌ ಸಾಧನೆ ದಾಖಲಾದದ್ದು 1996 ಫೆಬ್ರವರಿಯಲ್ಲಿ. ಅಂದು ಭಾರತ 94ನೇ ಸ್ಥಾನ ಅಲಂಕರಿಸಿ ಗಮನ ಸೆಳೆದಿತ್ತು. ಏಶ್ಯನ್‌ ರಾಷ್ಟ್ರಗಳಲ್ಲಿ ಭಾರತ 13ನೇ ಸ್ಥಾನದಲ್ಲಿದ್ದು, ಕತಾರ್‌, ಒಮಾನ್‌, ಜೋರ್ಡಾನ್‌, ಬಹರೈನ್ ಮತ್ತು ಉತ್ತರ ಕೊರಿಯಾವನ್ನು ಹಿಂದಿಕ್ಕಿದೆ. ಉಳಿದಂತೆ ಏಶ್ಯ ರಾಷ್ಟ್ರಗಳಲ್ಲಿ ಇರಾನ್‌ 33ನೇ, ಜಪಾನ್‌ 55ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next