Advertisement

ಟೀಂ ಇಂಡಿಯಾದ ಬಗ್ಗೆ ಕುಹಕವಾಡಿದ್ದ ಮೈಕಲ್ ವಾನ್ ಗೆ ಟ್ರೋಲ್ ಮಾಡಿದ ಅಭಿಮಾನಿಗಳು

03:26 PM Dec 29, 2020 | keerthan |

ಮುಂಬೈ: ಮೆಲ್ಬರ್ನ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಅಡಿಲೇಡ್ ಪಂದ್ಯದಲ್ಲಿ ಸೋಲನುಭವಿಸಿದ್ದ ತಂಡ ಮೆಲ್ಬರ್ನ್ ನಲ್ಲಿ ತಿರುಗೇಟು ನೀಡಿದ್ದು, ಸರಣಿ ಸಮಬಲ ಸಾಧಿಸಿದೆ.

Advertisement

ಈ ಪಂದ್ಯದ ಗೆಲುವಿನ ನಂತರ ಟೀಂ ಇಂಡಿಯಾ ಅಭಿಮಾನಿಗಳು ಇಂಗ್ಲೆಂಡ್ ನಾಯಕ ಮೈಕಲ್ ವಾನ್ ರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ತರಹೇವಾರಿ ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸರಣಿಯ ಆರಂಭಕ್ಕೆ ಮೊದಲು ಮೈಕಲ್ ವಾನ್ ಭಾರತ ತಂಡವನ್ನು ಟೀಕಿಸಿದ್ದರು. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡ ಆಸೀಸ್ ವಿರುದ್ಧ 4-0 ಅಂತರದ ಸೋಲನುಭವಿಸಲಿದೆ ಎಂದು ಭವಿಷ್ಯ ನುಡಿದಿದ್ದರು. ಮೊದಲ ಪಂದ್ಯದಲ್ಲಿ ಭಾರತ ಸೋಲನುಭವಿಸಿದ ಬಳಿಕ ಮತ್ತೆ ಅದೇ ರೀತಿ ಟ್ವೀಟ್ ಮಾಡಿ ಕುಹಕವಾಡಿದ್ದರು.

ಆದರೆ ಭಾರತ ತಂಡ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದ ಗೆಲುವು ಸಾಧಿಸಿ ಆಸೀಸ್ ಗೆ ತಿರುಗೇಟು ನೀಡಿದೆ. ಈ ಸಂದರ್ಭಕ್ಕೆ ಕಾದು ಕುಳಿತಿದ್ದ ಟೀಂ ಇಂಡಿಯಾ ಅಭಿಮಾನಿಗಳು ವಾನ್ ರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next