Advertisement

2017ರಲ್ಲಿ ಭಾರತ ಶೇ.7.7ರ ಆರ್ಥಿಕಾಭಿವೃದ್ಧಿ ಕಾಣಲಿದೆ: ವಿಶ್ವಸಂಸ್ಥೆ

11:59 AM Jan 18, 2017 | Team Udayavani |

ಹೊಸದಿಲ್ಲಿ : ನೋಟು ಅಪನಗದೀಕರಣ ಕ್ರಮದ ಹೊರತಾಗಿಯೂ ಭಾರತ ಅತ್ಯಂತ ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ವಿಶ್ವದ ಬೃಹತ್‌ ಆರ್ಥಿಕತೆಯಾಗಿದ್ದು 2017ರ ಹಣಕಾಸು ವರ್ಷದಲ್ಲಿ ಇದು ಶೇ.7.7ರ ಬೆಳವಣಿಗೆಯನ್ನು ಕಾಣಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

Advertisement

ವಿಶ್ವಸಂಸ್ಥೆಯ ಜಾಗತಿಕ ಆರ್ಥಿಕ ಮತ್ತು ಭವಿಷ್ಯ ಕುರಿತಾದ 2017ರ ವರದಿಯನ್ನು ನಿನ್ನೆ ಮಂಗಳವಾರ ಬಿಡುಗಡೆ ಮಾಡಲಾಗಿದೆ. ಈ ವರದಿಯಲ್ಲಿ 2017ರ ಭಾರತದ ಆರ್ಥಿಕಾಭಿವೃದ್ಧಿಯು ಶೇ.7.7ರ ಬೆಳವಣಿಗೆಯನ್ನು ಕಾಣಲಿದೆ. ಇದರ ಪರಿಣಾಮವಾಗಿ ಖಾಸಗಿ ಬಳಕೆಯು ಬಲಗೊಳ್ಳಲಿದ್ದು ಆ ಮೂಲಕ ಗಮನಾರ್ಹ ಆಂತರಿಕ ಸುಧಾರಣೆಗಳು ಜಾರಿಗೆ ಬರುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

2018ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಶೇ.7.6 ಪ್ರಮಾಣದಲ್ಲಿ ದಾಖಲಾಗಲಿದೆ ಎಂದು ವರದಿಯು ಅಂದಾಜು ಮಾಡಿದೆ. 

ಎರಡು ದಿನಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯು, ನೋಟು ಅಪನಗದೀಕರಣದ ಪರಿಣಾಮವಾಗಿ ಭಾರತದ ಆರ್ಥಿಕಾಭಿವೃದ್ಧಿಯನ್ನು ಶೇ.7.6ರಿಂದ ಶೇ.6.6 ಮಟ್ಟಕ್ಕೆ ಇಳಿಸಿತ್ತು. ಇದಕ್ಕೆ ವ್ಯತಿರಿಕ್ತವಾಗಿ ವಿಶ್ವಸಂಸ್ಥೆಯ ವರದಿಯು ಭಾರತದ ಆರ್ಥಿಕ ಪ್ರಗತಿ ಶೇ.7.7ರ ಪ್ರಮಾಣದಲ್ಲಿ 2017ರಲ್ಲಿ ದಾಖಲಾಗಲಿದೆ ಎಂದು ಹೇಳಿರುವುದು ಗಮನಾರ್ಹವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next