Advertisement

ಚೀನ ವಾಯು ಪ್ರದೇಶ ಅತಿಕ್ರಮಿಸಿದ ಭಾರತೀಯ ಡ್ರೋನ್‌ ಪತನ ?

11:17 AM Dec 07, 2017 | udayavani editorial |

ಬೀಜಿಂಗ್‌: ಭಾರತೀಯ ಡ್ರೋನ್‌ ಒಂದು (ಚಾಲಕನಿಲ್ಲದ ದೂರ ನಿಯಂತ್ರಿತ ವಾಯು ವಾಹನ) ತನ್ನ ವಾಯು ಪ್ರದೇಶವನ್ನು ಅತಿಕ್ರಮಿಸಿ ಒಳಗೆ ಬಂದು ಪತನಗೊಂಡಿರುವುದಾಗಿ ಚೀನ ಮಾಧ್ಯಮ ವರದಿ ಮಾಡಿದೆ. ಆದರೆ ಈ ಘಟನೆ ಯಾವಾಗ, ಎಲ್ಲಿ ನಡೆಯಿತು ಎಂಬಿತ್ಯಾದಿ ಅಗತ್ಯ ಮಾಹಿತಿಗಳನ್ನು ಅದು ನೀಡಿಲ್ಲ.

Advertisement

ಭಾರತೀಯ ಡ್ರೋನ್‌ ಒಂದು ಚೀನ ವಾಯು ಗಡಿಯನ್ನು ಅತಿಕ್ರಮಿಸಿ ಒಳಬಂದು ಪತನಗೊಂಡಾಗ ಚೀನೀ ಸೈನಿಕರು ವೃತ್ತಿಪರ ಹಾಗೂ ಹೊಣೆಯರಿತ ದೃಷ್ಟಿಕೋನದಿಂದ ಪತನಗೊಂಡ ವಾಯು ವಾಹನದ ಗುರುತು ಪರಿಶೀಲಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಚೀನ ಸೇನೆಯ ಹಿರಿಯಕ ಅಧಿಕಾರಿಯೋರ್ವರು ಹೇಳಿರುವುದನ್ನು ಚೀನದ ಸರಕಾರಿ ಒಡೆತನದ ಕ್ಸಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. 

ಈ ಆರೋಪಿತ ಕ್ರಮದಿಂದಾಗಿ ಭಾರತವು ಚೀನದ ಭೌಗೋಳಿಕ ಸಾರ್ವಭೌಮತೆಯ ಉಲ್ಲಂಘನೆ ಮಾಡಿದಂತಾಗಿದೆ ಎಂದು ಚೀನದ ಹಿರಿಯ ರಕ್ಷಣಾ ಅಧಿಕಾರಿ ಹೇಳಿದ್ದು  ಘಟನೆಯ ಬಗ್ಗೆ ಅತೃಪ್ತಿ ಮತ್ತು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ನಿನ್ನೆ ಬುಧವಾರವಷ್ಟೇ ಚೀನದ ಗ್ಲೋಬಲ್‌ ಟೈಮ್ಸ್‌, “ಭಾರತವು ಚೀನದ ಹೆಚ್ಚುತ್ತಿರುವ ನೌಕಾ ಸಾಮರ್ಥ್ಯವನ್ನು ತಡೆಯುವ ದುರುದ್ದೇಶದಲ್ಲಿ ಅಮೆರಿಕವನ್ನು ಎತ್ತಿ ಕಟ್ಟುತ್ತಿದೆ’ ಎಂದು ಆಪಾದಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next