Advertisement

ಲಂಡನ್‌ ವೆಸ್ಟ್‌ ಎಂಡ್‌ನ‌ಲ್ಲಿ ನೀರವ್‌ ಮೋದಿ ಬಂಗ್ಲೆ, ವಜ್ರ ವ್ಯಾಪಾರ

06:27 AM Mar 09, 2019 | udayavani editorial |

ಲಂಡನ್‌ : ಪಂಜಾಬ್‌ ನ್ಯಾಶನಲ್‌ ಬ್ಯಾಂಕಿಗೆ 13,000 ಕೋಟಿ ರೂ. ವಂಚನೆಗೈದು ವಿದೇಶಕ್ಕೆ ಪಲಾಯನಗೈದಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ, ಬಿಲಿಯಾಧಿಪತಿ ವಜ್ರಾಭರಣ ವ್ಯಾಪಾರಿ, 48ರ ಹರೆಯದ ನೀರವ್‌ ಮೋದಿ, ಲಂಡನ್‌ ನ ವೆಸ್ಟ್‌ ಎಂಡ್‌ ನಲ್ಲಿ 80 ಲಕ್ಷ ಪೌಂಡ್‌ ಬೆಲೆಯ ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಮುಕ್ತವಾಗಿ, ನಿರ್ಭಿಡೆಯಿಂದ ವಾಸಿಸಿಕೊಂಡಿರುವುದಾಗಿ ಬ್ರಿಟಿಷ್‌ ದೈನಿಕವೊಂದು ಇಂದು ಶನಿವಾರ ವರದಿ ಮಾಡಿದೆ. 

Advertisement

ಲಂಡನ್‌ ವೆಸ್ಟ್‌ ಎಂಡ್‌ನ‌ಲ್ಲಿರುವ ಸೆಂಟರ್‌ ಪಾಯಿಂಟ್‌ ಟವರ್‌ ಬ್ಲಾಕ್‌ನ ಐಶಾರಾಮಿ ಅಪಾರ್ಟ್‌ಮೆಂಟಿನ, ಮಹಡಿಯೊಂದರ ಅರ್ಧಾಂಶದಷ್ಟು ಸ್ಥಳಾವಕಾಶವನ್ನು ಒಳಗೊಂಡ, ಮೂರು ಬೆಡ್‌ ರೂಮಿನ ಫ್ಲ್ಯಾಟಿನಲ್ಲಿ  ನೀರವ್‌ ಮೋದಿ ನಿರಾತಂಕವಾಗಿ ಮತ್ತು ಮುಕ್ತವಾಗಿ ವಾಸಿಸಿಕೊಂಡಿದ್ದಾರೆ. ಅವರ ಈ ಫ್ಲ್ಯಾಟು ತಿಂಗಳಿಗೆ 17,000 ಪೌಂಡ್‌ ಬಾಡಿಗೆ ಆದಾಯ ತರಬಲ್ಲುದು ಎಂದು ಅಂದಾಜಿಸಲಾಗಿದೆ. 

ಎರಡು ದಿನಗಳ ಹಿಂದಷ್ಟೇ ನೀರವ್‌ ಮೋದಿ ಅವರ ಮಹಾರಾಷ್ಟ್ರದಲ್ಲಿನ ಕಿಹಿಂ ಬೀಚ್‌ ನಲ್ಲಿರುವ 30,000 ಚದರಡಿ ಸ್ಥಳಾವಕಾಶದ ಬೃಹತ್‌ ಐಶಾರಾಮಿ ಅಕ್ರಮ ಬಂಗಲೆಯನ್ನು  ಸರಕಾರಿ ಅಧಿಕಾರಿಗಳು ಡೈನಮಟ್‌ ಸ್ಫೋಟಿಸಿ ಕೆಡಹಿದ್ದರು. 

ಭಾರತದಲ್ಲಿ ನೀರವ್‌ ಮೋದಿ ಬ್ಯಾಂಕ್‌ ಖಾತೆಗಳನ್ನು ಅಧಿಕಾರಿಗಳು ಸ್ತಂಭನಗೊಳಿಸಿದ್ದಾರೆ. ಆತನ ವಿರುದ್ಧ ಇಂಟರ್‌ ಪೋಲ್‌ ರೆಡ್‌ ಕಾರ್ನರ್‌ ನೊಟೀಸ್‌ ಜಾರಿಯಾಗಿದೆ. ಆತ ಬ್ರಿಟನ್‌ ನಲ್ಲಿ ಆಸರೆಯನ್ನು ಕೋರಿದ್ದಾರೆ. ಇಷ್ಟಿದ್ದರೂ ನೀರವ್‌ ಮೋದಿ ಲಂಡನ್‌ನಲ್ಲಿ ಹೊಸ ವಜ್ರಾಭರಣ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಇವೆಲ್ಲದರ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ನೀರವ್‌ ಮೋದಿ, ‘ಸಾರಿ, ನೋ ಕಮೆಂಟ್ಸ್‌’ ಎಂದು ಹೇಳಿರುವುದಾಗಿ ಲಂಡನ್‌ ದೈನಿಕ ವರದಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next