Advertisement

13.8 ಲಕ್ಷ ಮೌಲ್ಯದ ನಾಣ್ಯಗಳ ವಶ

02:07 PM Mar 09, 2020 | Team Udayavani |

ವಲ್ಸಾದ್‌: 5 ಮತ್ತು 10 ರೂ. ಮುಖಬೆಲೆಯ 13.80 ಲಕ್ಷ ರೂ ಮೌಲ್ಯದ ನಾಣ್ಯಗಳನ್ನು ಇಬ್ಬರು ವ್ಯಕ್ತಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಮುಂಬಯಿ- ಅಹಮದಾಬಾದ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ನಾಣ್ಯಗಳನ್ನು ಇರಿಸಿಕೊಂಡು ಹೋಗುತ್ತಿದ್ದ ವೇಳೆ ಇವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

Advertisement

ನಾವು ಈ ನಾಣ್ಯಗಳನ್ನು ಬ್ಯಾಂಕ್‌ನಿಂದ ಸಂಗ್ರಹಿಸಿ ಟೋಲ್‌ ಬೂತ್‌ಗಳಿಗೆ ಸರಬರಾಜು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದರೂ, ಪೂರಕ ದಾಖಲೆ ಒದಗಿಸದ ಕಾರಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next