Advertisement

ದೇಶದ ಸಂಸ್ಕೃತಿ ಅರಿಯಲು ಪೌರಾಣಿಕ ನಾಟಕ ಸಹಕಾರಿ

02:52 PM Mar 24, 2022 | Team Udayavani |

ನೆಲಮಂಗಲ: ಪೌರಾಣಿಕ ನಾಟಕಗಳ ಪ್ರದರ್ಶನಗಳಿಂದ ಯುವಕರಿಗೆ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ತಿಳಿಸಿಕೊಡಲು ಸಹಕಾರಿಯಾಗುತ್ತದೆ. ಆಧುನಿಕತೆಯಿಂದ ಯುವಪೀಳಿಗೆ ನಾಡಿನ ಶ್ರೀಮಂತ ಇತಿಹಾಸ ಅರಿತುಕೊಳ್ಳಲು ಮುಂದಾಗುತ್ತಿಲ್ಲ ಎಂದು ತಾಪಂ ಮಾಜಿ ಅಧ್ಯಕ್ಷ ಪುಟ್ಟಗಂಗಯ್ಯ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಅಗಲಕುಪ್ಪೆ ಗ್ರಾಪಂ ವ್ಯಾಪ್ತಿಯ ಬೀರಗೊಂಡನಹಳ್ಳಿ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಕೃಪಾಪೋಷಿತ ನಾಟಕ ಮಂಡಳಿ ಆಯೋಜಿಸಿದ್ದ ಕುರುಕ್ಷೇತ್ರ, ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜಕ್ಕೆ ಕಲಾವಿದರು ಸಲ್ಲಿಸಿರುವ ಸೇವೆ ಯಾರೊಬ್ಬರು ಮರೆಯಲಾಗುವುದಿಲ್ಲ, ಗ್ರಾಮೀಣ ಪ್ರದೇಶದ ಜನರು ಜನಪದ ಕಲೆಗಳನ್ನು ಯಾವುದೇ ತರಬೇತಿಯಿಲ್ಲದೆ ಮೈಗೂಡಿಸಿ ಕೊಂಡಿರುತ್ತಾರೆ.

ಇತ್ತೀಚೆಗೆ ಜನಪದ ಕಲೆಗಳು ಹೆಚ್ಚು ಪ್ರಚಲಿತದಲ್ಲಿದ್ದು, ಸಾವಿರಾರು ಕಲಾವಿದರು ಜನಪದದ ಮೂಲಕ ಜನರನ್ನು ಮನರಂಜಿಸುತ್ತಿದ್ದಾರೆ ಎಂದರು.

ಶ್ಲಾಘನೀಯ: ಯುವಕರು ತಾಂತ್ರಿಕತೆಯನ್ನು ಮೈಗೂಢಿಸಿಕೊಂಡಂತೆಲ್ಲ ನಾಡಿನ ಸಂಸ್ಕೃತಿ ಮತ್ತು ನಡೆ-ನುಡಿಯನ್ನು ಮರೆಯುತ್ತಿರುವ ಪ್ರಸ್ತುತ ದಿನಗಳಲ್ಲಿ ಗ್ರಾಮದ ಯುವಕರು ಪೌರಾಣಿಕ ನಾಟಕ ಅಭಿನಯಿಸುತ್ತಿರುವುದು ಹೆಮ್ಮೆಯ ವಿಚಾರ. ಬೀರಗೊಂಡನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ತಡರಾತ್ರಿಯಲ್ಲಿಯೂ ಕುರುಕ್ಷೇತ್ರ ನಾಟಕ ವೀಕ್ಷಣೆಗೆ ಮುಂದಾಗುವ ಮೂಲಕ ತಮ್ಮ ಗ್ರಾಮದ ಕಲಾವಿದರಿಗೆ ಪ್ರೋತ್ಸಾಹ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕಲಾವಿದರಿಗೆ ಪ್ರೋತ್ಸಾಹ: ಗ್ರಾಪಂ ಸದಸ್ಯ ಲಕ್ಷ್ಮೀಶ್‌ ಪಟೇಲ್‌ ಮಾತನಾಡಿ, ಸಂಜೆ ಆದತಕ್ಷಣ ಕಿರುತೆರೆಯ ಧಾರಾವಾಹಿಗಳ ವೀಕ್ಷಣೆ ಮಾಡುವದನ್ನೇ ರೂಢಿಸಿಕೊಂಡಿರುವ ನಾಗರಿಕ ಸಮಾಜ ಕಲಾವಿದರಿಗೆ ಪ್ರೋತ್ಸಾಹ ನೀಡಲು ಮುಂದಾಗಿರುವುದು ಹೆಮ್ಮೆಯ ವಿಚಾರ. ಬೆಳ್ಳಿ ಮತ್ತು ಕಿರುತೆರೆಯಲ್ಲಿ ಪ್ರದರ್ಶನಗೊಳ್ಳುವ ಮನರಂಜನಾ ಕಾರ್ಯಕ್ರಮ ಹಲವು ದಿನಗಳು
ಮುಂಚಿ ತವಾಗಿ ಚಿತ್ರೀಕರಿಸಿ ಪ್ರದರ್ಶಿಸಲಾಗುತ್ತದೆ.

Advertisement

ಚಿತ್ರ ಕಲಾವಿದರಿಗೆ ಸಾಕಷ್ಟು ಬಾರಿ ಸರಿತಪ್ಪು ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಗ್ರಾಮೀಣ ಭಾಗದ ಕಲಾವಿದರು ನೇರವಾಗಿ ವೇದಿಕೆಯ ಮೇಲೆ ತಮ್ಮಲ್ಲಿ ಅಡಕವಾಗಿರುವ ಕಲೆಯನ್ನು ಪ್ರದರ್ಶಿಸಲು ಮುಂದಾಗುತ್ತಾರೆ. ಇದು ಹೆಮ್ಮೆಯ ಸಂಗತಿ ಎಂದರು.

ಅಭಿನಂದನೆ: ಸೋಫ‌ುರ ಗ್ರಾಪಂ ಅಧ್ಯಕ್ಷ ಪಂಚಾಕ್ಷರಿ, ಎಪಿಎಂಸಿ ನಿರ್ದೇಶಕ ಗಂಗಣ್ಣ, ಬಿಜೆಪಿ ತಾಲೂಕು ಉಪಾಧ್ಯಕ್ಷ ಜಗದೀಶ್‌ಚೌದರಿ, ಮುಖಂಡ ಗಂಗರುದ್ರಯ್ಯ, ಚಿಲುಮೆ ಟ್ರಸ್ಟ್‌ ಮುಖ್ಯಸ್ಥ ಕೆ.ಕೆಂಪೇಗೌಡ ಮತ್ತಿತರರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಗ್ರಾಪಂ ಮಾಜಿ ಸದಸ್ಯ ಪಟೇಲ್‌ ಸಿದ್ದಪ್ಪ, ಮುಖಂಡ ಮಂಜುನಾಥ್‌, ಕಲ್ಲನಾಯಕನಹಳ್ಳಿ ಕೆಂಪರಾಜು, ಅಭಯ್‌ ಲಕ್ಷ್ಮೀಶ್‌ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next