Advertisement

ಭಾರತೀಯ ಸಂಸ್ಕೃತಿ ಜಗತ್ತಿನಲ್ಲೆ  ಶ್ರೇಷ್ಠ ಸಂಸ್ಕೃತಿ

03:45 AM Jul 03, 2017 | |

ಉಡುಪಿ: ಜಗತ್ತಿನಲ್ಲಿ 48 ಪ್ರಾಚೀನ ಸಂಸ್ಕೃತಿಗಳಿದ್ದವು. ಎಲ್ಲವೂ ಅಸ್ತಿತ್ವ ಕಳೆದುಕೊಂಡಾಗ ಸ್ವಲ್ಪ ಮಟ್ಟಿಗೆ ಸಂಸ್ಕೃತಿ ಉಳಿದುಕೊಂಡಿದೆಯಾದರೆ ಅದು ಭಾರತ ಮತ್ತು ಚೀನಾದಲ್ಲಿ ಮಾತ್ರ. ಭಾರತೀಯ ಸಂಸ್ಕೃತಿಯು ಜಗತ್ತಿನಲ್ಲೆ ಒಂದು ಶ್ರೇಷ್ಠ ಸಂಸ್ಕೃತಿಯಾಗಿದೆ ಎಂದು ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಡಾ| ಎಚ್‌.ವಿ. ನರಸಿಂಹಮೂರ್ತಿ ಅವರು ಹೇಳಿದರು.

Advertisement

ಶ್ರೀ ವಿಶ್ವಕರ್ಮಾನ್ವಯ ಪ್ರದೀಪಿಕಾ ಗ್ರಂಥ ಪುನರ್‌ ಮುದ್ರಣಾ ಸಮಿತಿ ವತಿಯಿಂದ ಕುಂಜಿಬೆಟ್ಟುವಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಶ್ರೀ ವಿಶ್ವಕರ್ಮಾನ್ವಯ ಪ್ರದೀಪಿಕಾ (ಪರಿಷ್ಕೃತ ದೀಪಿಕೆಯೊಂದಿಗೆ) ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪರಂಪರೆಯ ಅರಿವು ಅಗತ್ಯ
ಭಾರತದ ಪರಂಪರೆ, ಜೀವನ ಪದ್ಧತಿ ಉತ್ತಮವಾಗಿದೆ. 64 ವಿದ್ಯೆಗಳಲ್ಲಿ ಶಿಲ್ಪ ಶಾಸ್ತ್ರಕ್ಕೆ ಹೆಚ್ಚಿನ ಒತ್ತು ಕೊಡಲಾಗಿತ್ತು. ಸಂಸ್ಕೃತಿ, ಸಂಸ್ಕಾರ, ಪರಂಪರೆಯ ಅರಿವು ಇಲ್ಲದವರಿಗೆ ವರ್ತಮಾನ, ಭವಿಷ್ಯತ್‌ ಇರುವುದಿಲ್ಲ ಎಂದ‌ು ಹೇಳಿದರು.
ಗ್ರಂಥ ಪುನರ್‌ ಮುದ್ರಣ ಸಮಿತಿ ಗೌರವಾಧ್ಯಕ್ಷ ವಿದ್ವಾನ್‌ ತಾಡಿಚರ್ಲ ವೀರ ರಾಘವ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. 
ವಿದ್ವಾಂಸ ರಾಘವ ನಂಬಿಯಾರ್‌, ವಿದ್ವಾನ್‌ ಚಂದ್ರಕಾಂತ್‌ ಶರ್ಮಾ ಹೆಬ್ರಿ, ವಿದ್ವಾನ್‌ ಚಂದ್ರೇಶ್‌ ಶರ್ಮಾ ಬೆಂಗಳೂರು, ಗ್ರಂಥ ಸಂಪಾದಕ ಡಾ| ಜಿ. ಜ್ಞಾನಾನಂದ, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ಕೆ. ಹರೀಶ ಆಚಾರ್ಯ, ಉಪ್ರಳ್ಳಿ ಶ್ರೀ ಕಾಳಿಕಾಂಬಾ ದೇಗುಲದ ಆಡಳಿತ ಮೊಕ್ತೇಸರ ಮಂಜುನಾಥ ಆಚಾರ್ಯ ಬಡಾಕರೆ, ಕಾಪು ಶ್ರೀ ಕಾಳಿಕಾಂಬಾ ದೇವಳದ ಆಡಳಿತ ಮೊಕ್ತೇಸರ ಶೇಖರ್‌ ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಯು.ಕೆ.ಎಸ್‌. ಸೀತಾರಾಮ ಆಚಾರ್ಯ, ಕುಂಜಿಬೆಟ್ಟು ಆರ್‌ವಿಎಸ್‌ಎಸ್‌ ಸಂಘದ ಅಧ್ಯಕ್ಷ ವಾಸುದೇವ ಆಚಾರ್ಯ, ಬಿ.ಎ. ಆಚಾರ್ಯ ಮಣಿಪಾಲ ಅವರು ಉಪಸ್ಥಿತರಿದ್ದರು.

ಸಮಿತಿ ಅಧ್ಯಕ್ಷ ಪಿ. ವಾದಿರಾಜ ಆಚಾರ್ಯ ಸ್ವಾಗತಿಸಿದರು. ಕೋಶಾಧಿಕಾರಿ ಗಣೇಶ್‌ ಹಿರಿಯಡಕ ಪ್ರಸ್ತಾವನೆಗೈದರು. ಪ್ರಕಾಶ್‌ ಪುರೋಹಿತ್‌ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನಿತ್ಯಾನಂದ ಎಸ್‌. ಆಚಾರ್ಯ ವಂದಿಸಿದರು. 

“ಗ್ರಂಥಗಳು ಭಾಷಾಂತರವಾಗಲಿ’
ಕಟಪಾಡಿ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನವಿತ್ತು, ಶಾಸ್ತ್ರ ಸಮೃದ್ಧವಾದ ಗ್ರಂಥಗಳು ಸಮಾಜಕ್ಕೆ ದೊಡ್ಡ ಸಂಪತ್ತಾಗಿದೆ. ಸಂಸ್ಕೃತದಲ್ಲಿರುವಂತಹ ಗ್ರಂಥಗಳನ್ನು ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರ ಮಾಡಿದರೆ ಜನಸಾಮಾನ್ಯರಿಗೂ ಅದರ ಒಳಗಿರುವ ಸಾರವನ್ನು ಅರಿಯಲು ಸಾಧ್ಯವಾಗುತ್ತದೆ ಎಂದರು.

Advertisement

ಬೇಧ-ಭಾವ ಬೇಡ
ಪೇಜಾವರ ಶ್ರೀಗಳು ನಡೆಸಿರುವ ಈದ್‌ ಉಪಾಹಾರ ಕೂಟದ ಬಗ್ಗೆ ಸಮಾಜದಲ್ಲಿ ಅನಗತ್ಯವಾದ ಚರ್ಚೆಯಾಗುತ್ತಿದೆ. ಭಾರತದಲ್ಲಿರುವ ಹಿಂದೂ, ಮುಸಲ್ಮಾನರು, ಕ್ರಿಶ್ಚಿಯನ್ನರು ಹೊರಗಿನವರೇ? ಪರಂಪರಾಗತ ಇತಿಹಾಸವನ್ನು ತಿಳಿದುಕೊಂಡರೆ ಎಲ್ಲವೂ, ಎಲ್ಲರಿಗೂ ಅರ್ಥವಾಗುತ್ತದೆ. ಬೇಧ-ಭಾವ ಸಲ್ಲದು ಎಂದು ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next