Advertisement

ಗೆಲುವಿನ ಬಳಿಕ ಭಾರತ ಕ್ರಿಕೆಟಿಗರ ಭರ್ಜರಿ ಭೋಜನ

06:15 AM Feb 20, 2018 | Team Udayavani |

ಜೊಹಾನ್ಸ್‌ಬರ್ಗ್‌: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದ ಗೆಲುವಿನ ಬಳಿಕ ಭಾರತ ಆಟಗಾರರು ಭರ್ಜರಿ ಪಾರ್ಟಿ ಮಾಡಿದರು.

Advertisement

ಗೆಲುವಿನ ಸಂಭ್ರಮವನ್ನು ಆಚರಿಸಿಕೊಂಡಿರುವುದನ್ನು ಸುರೇಶ್‌ ರೈನಾ ತಮ್ಮ ಅಧಿಕೃತ ಟ್ವೀಟರ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ “ಪ್ರಚಂಡ ಗೆಲುವನ್ನು ಆಚರಿಸುವುದಕ್ಕೆ ಒಂದೊಳ್ಳೆ ಖುಷಿ ಸಾಕು..ಡಿನ್ನರ್‌ ಟೈಮ್‌ ವಿತ್‌ ದಿ ಬಾಯ್ಸ??’ ಎಂದು ರೈನಾ ಪ್ರಕಟಣೆಯಲ್ಲಿ ಬರೆದುಕೊಂಡಿದ್ದಾರೆ.

ಇದೇ ಫೋಟೋವನ್ನು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಕೂಡ ತಮ್ಮ ಟ್ವೀಟರ್‌ ಖಾತೆಯಿಂದ ಪ್ರಕಟಸಿದ್ದಾರೆ. ಗೆಲುವಿನ ನಂತರ ನಮ್ಮ ಆಟಗಾರರೊಂದಿಗೆ ರಾತ್ರಿಯ ಊಟ ಮಾಡಿದೆ’ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ. ಭಾರತ ಆರಂಭದ ಟೆಸ್ಟ್‌ ಪಂದ್ಯವನ್ನು ಸೋತರೂ ಬಳಿಕ ಎಚ್ಚೆತ್ತು ಟೆಸ್ಟ್‌ ಸರಣಿಯನ್ನು ಗೆದ್ದಿತ್ತು. ಬಳಿಕ ಏಕದಿನ ಸರಣಿಯನ್ನು ಬೃಹತ್‌ ಅಂತರದಿಂದ ಗೆದ್ದಿತ್ತು. ಇದೀಗ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನೂ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. 

ದಕ್ಷಿಣ ಆಫ್ರಿಕಾದಲ್ಲಿ ಭಾರತ ಕ್ರಿಕೆಟಿಗರು ಅಮೋಘ ಆಟ ಪ್ರದರ್ಶಿಸಿದ್ದಾರೆ. ತವರಿನಲ್ಲಿ ಹುಲಿಗಳು ವಿದೇಶಿ ಪಿಚ್‌ನಲ್ಲಿ ಕಾಗದದ ಹುಲಿಗಳು ಎಂದು ಟೀಕೆ ಮಾಡುತ್ತಿದ್ದ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next