Advertisement
ಆದರೆ ಸೆಹವಾಗ್ ಸೇರಿದಂತೆ ಇದುವರೆಗೆ ಯಾವುದೇ ಭಾರತೀಯ ಕ್ರಿಕೆಟ್‌ಗೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾಗಿಲ್ಲ. ಆದ್ದರಿಂದ ಬಿಸಿಸಿಐ ಅನುಭವಿ ವಿದೇಶಿ ಕೋಚ್ ಟಾಮ್ ಮೂಡಿಯತ್ತ ಒಲವು ತೋರಿದೆ ಎಂದು ವರದಿಗಳಾಗಿವೆ.
ಮತ್ತೂಂದು ಕಡೆ ರಾಹುಲ್ ದ್ರಾವಿಡ್ ಆಗಲಿ ಎಂದು ಕೆಲವರು ಹೇಳುತ್ತಾರೆ. ಈ ಬಗ್ಗೆ ದ್ರಾವಿಡ್ ಆಸಕ್ತಿ ತೋರಿಲ್ಲವೇ? ಅಥವಾ
ಬೇರೇಧಿನಾದರೂ ಅಡ್ಡಿಗಳಿವೆಯೇ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಹಿಂದೆ ತಂಡದ ನಿರ್ದೇಶಕರಾಗಿದ್ದ ರವಿಶಾಸಿŒ ಕುರಿತೂ ಆಸಕ್ತಿಯಿದ್ದರೂ ಈ ಹಿಂದೆ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೂ ಆಯ್ಕೆ ಮಾಡದ ಬಿಸಿಸಿಐ ಕ್ರಮದ ಬಗ್ಗೆ ಅವರು ಸಿಟ್ಟಾಗಿರುವುದು ಖಚಿತ.
Related Articles
Advertisement
ಕೊಹ್ಲಿ ಒಪ್ಪುತ್ತಾರಾ?: ಕುಂಬ್ಳೆ ಮುಂದುವರಿಸಲು ಬಿಸಿಸಿಐ ಮುಂದಾದರೂ ಅದಕ್ಕೆ ಕೊಹ್ಲಿ ಒಪ್ಪುತ್ತಾರಾ ಎನ್ನುವುದು ಇನ್ನೊಂದು ಪ್ರಶ್ನೆ. ತೀವ್ರ ಭಿನ್ನಾಭಿಪ್ರಾಯ ಹೊಂದಿರುವುದರಿಂದ, ಕೆಲವು ನಿರ್ಧಾರಗಳು ಕೊಹ್ಲಿಗೆ ಇಷ್ಟವಾಗದಿರುವುದರಿಂದ ಕೋಚ್ ಆಗಿ ಕುಂಬ್ಳೆ ಬೇಡವೇ ಬೇಡವೆಂದು ಕೊಹ್ಲಿ ಹೇಳಿದ್ದಾರೆನ್ನಲಾಗಿದೆ. ಬಿಸಿಸಿಐ ಕೂಡ ಕುಂಬ್ಳೆ ಬಗ್ಗೆ ಮುನಿದುಕೊಂಡಿದೆ. ಇಂತಹ ಸ್ಥಿತಿಯಲ್ಲಿ ಮತ್ತೆ ಕುಂಬ್ಳೆ ಆಯ್ಕೆ ಹೇಗೆ ಎನ್ನುವುದು ಪ್ರಶ್ನೆ ಕುಂಬ್ಳೆ, ಕೊಹ್ಲಿ ಜೊತೆ ಬಿಸಿಸಿಐ ಚರ್ಚೆ ಸಾಧ್ಯತೆ ಮೂಲಗಳ ಪ್ರಕಾರ ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ, ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಎಂ.ವಿ.ಶ್ರೀಧರ್ ಅವರು ಕುಂಬ್ಳೆ ಮತ್ತು ಕೊಹ್ಲಿಯೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇಬ್ಬರ ಅಭಿಪ್ರಾಯ ಕೇಳುವ ಯತ್ನ ಮಾಡಲಿದ್ದಾರೆ. ಇಬ್ಬರನ್ನೂ ಒಂದುಗೂಡಿಸುವ ಯತ್ನ ಮಾಡಿ ಯಶಸ್ವಿ ಜೋಡಿಯನ್ನು ಮತ್ತೆ ಮುಂದುವರಿಸುವ ಯೋಚನೆಯೂ ಇದೆ.