Advertisement
ಏಕದಿನ ವಿಶ್ವಕಪ್‌ಗ್ೂ ಮುನ್ನ ಕ್ರಿಕೆಟ್ ಜಾತ್ರೆ ಎಂದೇ ಪರಿಗಣಿಸಲ್ಪಟ್ಟಿ ರುವ ಐಪಿಎಲ್‌ನಿಂದ ಭಾರತೀಯ ಆಟಗಾರರ ರಹಸ್ಯಗಳೆಲ್ಲವೂ ಬಯಲಾ ಗುತ್ತಿದೆ ಎಂಬ ಆಂತಕ ಎಲ್ಲರಲ್ಲೂ ಮೂಡ ತೊಡಗಿದೆ. ಸದ್ಯ ವಿಶ್ವಕಪ್ ತಂಡದಲ್ಲಿರುವ ಆಟಗಾರರು ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರೊಂದಿಗೆ ವಿದೇಶಿ ಆಟಗಾರರು ಕೂಡ ವಿವಿಧ ಫ್ರಾಂಚೈಸಿಗಳಲ್ಲಿದ್ದಾರೆ. ಇಷ್ಟೇ ಅಲ್ಲದೇ ಇತರ ತಂಡಗಳ ಕೋಚ್‌ಗಳು ಐಪಿಎಲ್ ಫ್ರಾಂಚೈಸಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಈ ಎಲ್ಲ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಇದು ವಿಶ್ವಕಪ್ ವೇಳೆ ಭಾರತದ ಹಿನ್ನಡೆ ಕಾರಣವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಪಾಂಟಿಂಗ್ ಮಾತ್ರವಲ್ಲದೇ ಶ್ರೀಲಂಕಾದ ರಾಷ್ಟ್ರೀಯ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀರಾಮ್ ಸೋಮಯಾಜುಲ ಡೆಲ್ಲಿ ತಂಡದ ವಿಶ್ಲೇಷಕರಾಗಿ ಪಾಂಟಿಂಗ್ ಜತೆ ಕೆಲಸ ಮಾಡುತ್ತಿದ್ದಾರೆ.
Related Articles
Advertisement