Advertisement

ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಭಾರತದ ಆಟಗಾರರು: ಸ್ಮಿತ್ ಶತಕ ಸಂಭ್ರಮ

09:57 AM Jan 20, 2020 | keerthan |

ಬೆಂಗಳೂರು: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಏಕದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿದೆ. ಆದರೆ ನಿರ್ಣಾಯಕ ಪಂದ್ಯವಾಡಲು ಕಣಕ್ಕಿಳಿದ ಟೀಂ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡುತ್ತಿದ್ದಾರೆ.

Advertisement

ಭಾರತ ಕಂಡ ಅಪರೂಪದ ಆಲ್ ರೌಂಡರ್ ಬಾಪು ನಾಡಕರ್ಣಿ ಅವರು ಶನಿವಾರ ನಿಧನ ಹೊಂದಿದ್ದರು. ಇಳಿವಯಸ್ಸಿನವರಾಗಿದ್ದ ಬಾಪು ನಾಡಕರ್ಣಿಯವರು ವಯೋ ಸಹಜ ಖಾಯಿಲೆಯಿಂದ ನಿನ್ನೆ ಅಸುನೀಗಿದ್ದರು.

ಬಾಪು ನಾಡಕರ್ಣಿಯವರ ಸಂತಾಪ ಸೂಚಿಸುವ ನಿಟ್ಟಿನಲ್ಲಿ ಇಂದಿನ ಪಂದ್ಯದಲ್ಲಿ ಟೀ ಇಂಡಿಯಾ ಆಟಗಾರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಡಿದರು.

ಸ್ಮಿತ್ ಶತಕ ಸಂಭ್ರಮ
ಕಳೆದ ಪಂದ್ಯದಲ್ಲಿ ಭಾರತೀಯ ಬೌಲರ್ ಗಳನ್ನು ಕಾಡಿದ್ದ ಸ್ಮಿತ್ ಇಂದೂ ತಮ್ಮ ಬ್ಯಾಟಿಂಗ್ ಪರಾಕ್ರಮ ಮುಂದುವರಿಸಿದರು. ಮಾರ್ನಸ್ ಲಬುಶೇನ್ ಜೊತೆ ಶತಕದ ಜೊತೆಯಾಟ ಆಡಿದರು. ಭರ್ಜರಿ ಬ್ಯಾಟಿಂಗ್ ನಡೆಸಿದ ಸ್ಟೀವ್ ಏಕದಿನ  ಬಾಳ್ವೆಯ ಒಂಬತ್ತನೇ ಶತಕ ಬಾರಿಸಿದರು.

132 ಎಸೆತ ಎದುರಿಸಿದ ಸ್ಮಿತ್ 135 ರನ್ ಗಳಿಸಿದರು. 2017ರ ಜನವರಿಯ ನಂತರ ಸ್ಮಿತ್ ಬಾರಿಸಿದ ಮೊದಲ ಏಕದಿನ ಶತಕವಿದು.

Advertisement

ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತು. ಭಾರತದ ಪರ ಮೊಹಮ್ಮದ್ ಶಮಿ 4 ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next