ನವದೆಹಲಿ: 45 ಪಿಸ್ತೂಲ್ ಗಳನ್ನು ಹೊಂದಿದ್ದ ಭಾರತೀಯ ದಂಪತಿಯನ್ನು ಬುಧವಾರ (ಜುಲೈ 13) ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:ಬ್ಯಾಟರಾಯನಪುರ: ಶಿಥಿಲಾವಸ್ಥೆಯಲ್ಲಿದ್ದ ಗೋಡೆ ಕುಸಿದು ಇಬ್ಬರ ಸಾವು
ಇದು ನಿಜವಾದ ಗನ್ ಗಳು ಹೌದೋ ಅಲ್ಲವೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಭಯೋತ್ಪಾದಕ ನಿಗ್ರಹದ ರಾಷ್ಟ್ರೀಯ ಭದ್ರತಾ ಪಡೆ (ಎನ್ ಎಸ್ ಜಿ), ಇವು ನಿಜವಾದ ಗನ್ ಗಳಂತೆ ಇವೆ ಎಂದು ತಿಳಿಸಿದೆ.
ಎನ್ ಎಸ್ ಜಿಯ ಪ್ರಾಥಮಿಕ ವರದಿ ಪ್ರಕಾರ, ಈ ಗನ್ ಗಳು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಬಲ್ಲ ಸಾಮರ್ಥ್ಯ ಹೊಂದಿದೆ ಎಂದು ಪಿಟಿಐ ನ್ಯೂಸ್ ಏಜೆನ್ಸಿ ವರದಿ ವಿವರಿಸಿದೆ. ಬಂಧಿತರನ್ನು ಜಗಜಿತ್ ಸಿಂಗ್ ಮತ್ತು ಜಸ್ವಿಂದರ್ ಕೌರ್ ದಂಪತಿ ಎಂದು ಗುರುತಿಸಲಾಗಿದೆ.
ಇಬ್ಬರು ವಿಯೆಟ್ನಾಂನಿಂದ ಭಾರತಕ್ಕೆ ವಾಪಸ್ ಆಗಿದ್ದರು. ಎರಡು ಟ್ರೋಲಿ ಬ್ಯಾಗ್ ಗಳಲ್ಲಿ ತುಂಬಿಸಿದ್ದ ಪಿಸ್ತೂಲ್ ಗಳ ಸಹಿತ ಜಗಜಿತ್ ಸಿಂಗ್ ಬಂಧಿಯಾಗಿರುವುದಾಗಿ ವರದಿ ತಿಳಿಸಿದೆ. ಈ ಗನ್ ಗಳ ಒಟ್ಟು ಬೆಲೆ 22.5 ಲಕ್ಷ ರೂಪಾಯಿಗಳು ಎಂದು ವರದಿ ವಿವರಿಸಿದೆ.