Advertisement

ಇಸ್ರೇಲ್‌ನಲ್ಲಿ ಕರ್ನಾಟಕ ದಂಪತಿ-ಮಕ್ಕಳ ಬಂಧನ

09:50 AM Nov 10, 2019 | Team Udayavani |

ಜೆರುಸಲೇಂ: ಇಸ್ರೇಲ್‌ನಲ್ಲಿರುವ ಕರ್ನಾಟಕ ಮೂಲದ ಒಂದೇ ಕುಟುಂಬದ ನಾಲ್ವರನ್ನು ಬಂಧಿಸಲಾಗಿದ್ದು, ಕಾನೂನು ಪ್ರಕ್ರಿಯೆ ಮುಕ್ತಾಯದ ಬಳಿಕ ಗಡಿಪಾರು ಮಾಡಲಾಗುತ್ತದೆ. ಈ ಪೈಕಿ ಇಬ್ಬರು ಮಕ್ಕಳೂ ಸೇರಿದ್ದಾರೆ. ಇಸ್ರೇಲ್‌ನಾದ್ಯಂತ ಅಕ್ರಮವಾಗಿ ನೆಲೆಸಿರುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

Advertisement

ಹನ್ನೆರಡು ವರ್ಷಗಳ ಹಿಂದೆ ದಂಪತಿ ಭಾರತದಿಂದ ಇಸ್ರೇಲ್‌ಗೆ ಉದ್ಯೋಗಕ್ಕಾಗಿ ಆಗಮಿಸಿದ್ದರು. 12 ವರ್ಷದ ಎಲಿನಾ ಮತ್ತು ಒಂದೂವರೆ ವರ್ಷದ ಮಗು ಇಸ್ರೇಲ್‌ನಲ್ಲಿಯೇ ಜನಿಸಿದ್ದಾರೆ. 2018ರ ಫೆಬ್ರವರಿಯಲ್ಲಿ ಭಾರತೀಯ ರಾಯಭಾರ ಕಚೇರಿಗೆ ಮಕ್ಕಳ ಜನನ ವಿಚಾರ ನೋಂದಾಯಿಸಲು ಆಗಮಿಸಿದ್ದರೂ, ಪ್ರಕ್ರಿಯೆ ಪೂರ್ತಿಗೊಂಡಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next