Advertisement

ಕೋವಿಡ್ ವೈರಸ್ ಪತ್ತೆಗೆ ಕ್ಷಯ ರೋಗ ಪರೀಕ್ಷಾ ಯಂತ್ರ

09:11 AM Apr 12, 2020 | Hari Prasad |

ನವದೆಹಲಿ: ಔಷಧ ನಿರೋಧಕ ಕ್ಷಯರೋಗದ ಪತ್ತೆಗಾಗಿ ಬಳಸಲಾಗುವ ಪರೀಕ್ಷಾ ಯಂತ್ರಗಳನ್ನು ಕೋವಿಡ್ ಸೋಂಕು ಪತ್ತೆಗೆ  ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್‌ (ಐಎಂಆರ್‌ಸಿ) ಒಪ್ಪಿಗೆ ನೀಡಿದೆ. ಕೋವಿಡ್ 19 ವೈರಸ್ ಶಂಕಿತರ ಪರೀಕ್ಷಾ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

Advertisement

ಔಷಧ ನಿರೋಧಕ ಕ್ಷಯರೋಗದ ಪತ್ತೆಗೆ ಬಳಸಲಾಗುವ “TruenatTM beta CoV ಪರೀಕ್ಷಾ ವಿಧಾನವನ್ನು ಕೋವಿಡ್ ಪತ್ತೆಗೆ ಬಳಸಲು ಒಪ್ಪಿಗೆ ನೀಡಿದೆ. ಸೋಂಕಿತರ ಗಂಟಲು ಹಾಗೂ ಮೂಗಿನ ಸ್ವಾಬ್‌ಗಳನ್ನು ಪಡೆದು ಅವುಗಳ ಮೂಲಕ ಕೋವಿಡ್ ಸೋಂಕಿನ ಪರೀಕ್ಷೆ ನಡೆಸಲಾಗುತ್ತದೆ.

‘ಈವರೆಗೆ, ಈ ಪರೀಕ್ಷೆಗಳನ್ನು ‘ಬಿಎಸ್‌ಎಲ್‌-2′, ‘ಬಿಎಸ್‌ಎಲ್‌-3′ ಹಂತದ ಸುರಕ್ಷತೆಗಳನ್ನು ಹೊಂದಿರುವ ‘TruelabTM’ ಕೇಂದ್ರಗಳಲ್ಲಿ ತಂತ್ರಜ್ಞರು, ಮೈ ಕವಚ ಧರಿಸಿ, ಕ್ಷಯರೋಗದ ವೈರಾಣುಗಳ ಬಗ್ಗೆ ಪರೀಕ್ಷೆ ನಡೆಸಿದ್ದರು. ಪುಣೆಯಲ್ಲಿರುವ ‘ಐಸಿಎಂಆರ್‌-ಎನ್‌ಐವಿ’ ಕೇಂದ್ರದಲ್ಲಿ ಈ ಪರೀಕ್ಷೆ ಲಭ್ಯವಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next