Advertisement

ಗಸ್ತು ಪಡೆಗೆ ವರದ್‌ ಶಕ್ತಿ ; ಕರಾವಳಿ ಕಾವಲಿಗೆ ಸಮರ್ಪಣೆಗೊಂಡ ಹೊಸ ಹಡಗು

09:05 AM Mar 01, 2020 | Hari Prasad |

ಚೆನ್ನೈ: ಭಾರತದ ಕರಾವಳಿ ಕಾವಲು ಪಡೆಗಾಗಿ ಸಿದ್ಧಪಡಿಸಲಾಗಿರುವ ವರದ್‌ ಎಂಬ ದೈತ್ಯ ಗಸ್ತು ಹಡಗನ್ನು ಕೇಂದ್ರ ಹಡಗು ಇಲಾಖೆಯ ಸಹಾಯಕ ಸಚಿವ ಮನ್ಸುಕ್‌ ಎಲ್‌. ಮಾಂಡವಿಯ, ಶುಕ್ರವಾರ ಲೋಕಾರ್ಪಣೆಗೊಳಿಸಿದರು.

Advertisement

321 ಅಡಿ ಉದ್ದವಿರುವ ಈ ಹಡಗನ್ನು ‘ಲಾರ್ಸನ್‌ ಆ್ಯಂಡ್‌ ಟರ್ಬೋ (ಎಲ್‌ ಆ್ಯಂಡ್‌ ಟಿ) ಕಂಪೆನಿಯು, ಚೆನ್ನೈ ಬಳಿಯ ಕಟ್ಟು ಪಲ್ಲಿಯಲ್ಲಿರುವ ತನ್ನ ಹಡಗು ನಿರ್ಮಾಣ ಕಾರ್ಯಾಗಾರದಲ್ಲಿ ತಯಾರಿಸಿದೆ. ಈ ಹೊಸ ಹಡಗು, 28 ವರ್ಷಗಳಿಂದ ಕರಾವಳಿ ಕಾವಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ವರಾದ್‌ ಎಂಬ ಹೆಸರನ್ನೇ ಹೊಂದಿರುವ ಮತ್ತೂಂದು ಹಳೆಯ ಹಡಗಿನ ಬದಲಿಗೆ ಸೇವೆ ಸಲ್ಲಿಸಲಿದೆ.

2015ರಲ್ಲಿ ‘ಎಲ್‌ ಆ್ಯಂಡ್‌ ಟಿ’ ಕಂಪೆನಿಯು 7 ಗಸ್ತು ಹಡಗುಗಳನ್ನು ನಿರ್ಮಿಸಿಕೊಡುವ 1,432 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿತ್ತು. ಅದರಂತೆ, ನಾಲ್ಕು ಹಡಗುಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದ್ದು, ಈ ಶ್ರೇಣಿಯಲ್ಲಿ ಹೊಸ ವರದ್‌ ಐದನೇ ಹಡಗಾಗಿದೆ.

ವಿಶೇಷತೆಗಳೇನು?
– ಅತ್ಯಾಧುನಿಕ ನೇವಿಗೇಷನ್‌ ತಂತ್ರಜ್ಞಾನ

– ಈಗಿನ ಅಗತ್ಯಗಳಿಗೆ ತಕ್ಕಂಥ ಸೌಲಭ್ಯಗಳು

Advertisement

– 10 ಸಾವಿರ ಕಿ.ಮೀ.ವರೆಗೆ ನಿಲುಗಡೆ ರಹಿತ ಪ್ರಯಾಣ

– ಶೇ. 90ರಷ್ಟು ಬಿಡಿಭಾಗಗಳು ಸ್ವದೇಶದಲ್ಲೇ ನಿರ್ಮಾಣ

Advertisement

Udayavani is now on Telegram. Click here to join our channel and stay updated with the latest news.

Next