Advertisement

ಕಾಂಚನಜುಂಗಾ ಹತ್ತುತ್ತಿದ್ದ ಪರ್ವತಾರೋಹಿ ನಿಧನ

08:13 PM May 06, 2022 | Team Udayavani |

ಕಠ್ಮಂಡು: ನೇಪಾಳದಲ್ಲಿರುವ ವಿಶ್ವದ ಮೂರನೇ ಅತ್ಯಂತ ಎತ್ತರದ ಪರ್ವತವಾಗಿರುವ ಕಾಂಚನಜುಂಗಾವನ್ನು ಹತ್ತುತ್ತಿದ್ದ ಭಾರತೀಯ ಪರ್ವತಾರೋಹಿ ನಾರಾಯಣ ಐಯ್ಯರ್‌(52) ಗುರುವಾರ ಸಾವನ್ನಪ್ಪಿದ್ದಾರೆ.

Advertisement

ಈ ವರ್ಷದ ಸೀಸನ್‌ನಲ್ಲಿ ನೇಪಾಳದ ಪರ್ವತಗಳಲ್ಲಿ ಸಾವನ್ನಪ್ಪಿದ ಮೂರನೇ ಪರ್ವತಾರೋಹಿ ಇವರಾಗಿದ್ದಾರೆ. “ನಾರಾಯಣ ಅವರು ಪರ್ವತವನ್ನು ಎಲ್ಲರಿಗಿಂತ ನಿಧಾನವಾಗಿ ಹತ್ತುತ್ತಿದ್ದರು. ಅವರಿಗೆಂದೇ ಇಬ್ಬರು ಮಾರ್ಗದರ್ಶಿಗಳಿದ್ದರು.

ಮೊದಲಿನಿಂದಲೇ ಸುಸ್ತಾಗಿದ್ದ ಅವರು 8,200 ಮೀಟರ್‌ ಎತ್ತರ ಹತ್ತುತ್ತಿದ್ದಂತೆಯೇ ಬಿದ್ದು, ಕೊನೆಯುಸಿರೆಳೆದಿದ್ದಾರೆ’ ಎಂದು ಪರ್ವತಾರೋಹಣ ನಡೆಸಿಕೊಡುವ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next