Advertisement

ಟುಸ್ಸಾಡ್ಸ್‌ ಮ್ಯೂಸಿಯಂನಲ್ಲಿ ಕೊಹ್ಲಿ ಪ್ರತಿಮೆ

01:00 AM May 30, 2019 | Team Udayavani |

ಲಂಡನ್‌: ಜಗದ್ವಿಖ್ಯಾತ ಮೇಡಮ್‌ ಟುಸಾಡ್ಸ್‌ ಮ್ಯೂಸಿಯಂ ನಲ್ಲಿ ಪ್ರತಿಮೆಯಾಗಿ ನಿಲ್ಲುವ ಭಾಗ್ಯ ಈಗ ಭಾರತದ ಕ್ರಿಕೆಟ್ ಕಪ್ತಾನ ವಿರಾಟ್ ಕೊಹ್ಲಿಗೂ ಸಿಕ್ಕಿದೆ. ವಿಶ್ವಕಪ್‌ ಕ್ರಿಕೆಟ್ ಅಭಿಯಾನ ಶುರುವಾಗುವ ದ್ಯೋತಕವಾಗಿ ಗುರುವಾರ ಕೊಹ್ಲಿಯ ಮೇಣದ ಪ್ರತಿಮೆ ಇಲ್ಲಿ ಅನಾವರಣಗೊಳ್ಳಲಿದೆ. ಜೂ. 15ರ ತನಕ ಈ ಪ್ರತಿಮೆ ವೀಕ್ಷಣೆಗೆ ಲಭ್ಯ.

Advertisement

ಜಗತ್ತಿನ ಖ್ಯಾತ ವ್ಯಕ್ತಿಗಳ ಮೇಣದ ಪ್ರತಿಮೆಯ ಸಂಗ್ರಹಕ್ಕಾಗಿ ಟುಸಾಡ್ಸ್‌ ಮ್ಯೂಸಿಯಂ ಪ್ರಸಿದ್ಧವಾಗಿದೆ. ಸಚಿನ್‌ ತೆಂಡುಲ್ಕರ್‌ ಇಲ್ಲಿ ಪ್ರತಿಮೆಯಾಗಿರುವ ಇನ್ನೋರ್ವ ಭಾರತೀಯ ಕ್ರಿಕೆಟಿಗ. ಉಸೇನ್‌ ಬೋಲ್r, ಸರ್‌ ಮೊ ಫ‌ರಾ ಮತ್ತಿತರ ಕ್ರೀಡಾಳುಗಳ ಪ್ರತಿಮೆ ಇಲ್ಲಿದೆ.

ಕೊಹ್ಲಿಯ ಪ್ರತಿಮೆ ಭಾರತದ ಕ್ರಿಕೆಟ್ ಜೆರ್ಸಿಯಲ್ಲಿರುತ್ತದೆ. ಪ್ರತಿಮೆಗೆ ಶೂ ಮತ್ತು ಗ್ಲೌಸನ್ನು ಕೊಹ್ಲಿಯೇ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next