Advertisement
ಅಂತಾರಾಷ್ಟಿrಯ ಮಟ್ಟದ ಸಂಪನ್ಮೂಲ ವ್ಯಕ್ತಿ ಸಂತೋಷ್ ನಾಯರ್ ಅವರು ಶಿಬಿರದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು. ಬಂಟ ಸಮಾಜದ ಉದ್ಯಮಿಗಳಿಗಾಗಿ ಆಯೋಜಿಸಲಾಗಿದ್ದ ಈ ಶಿಬಿರವನ್ನು ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಅಧ್ಯಕ್ಷ, ಉದ್ಯಮಿ ಕೆ. ಸಿ. ಶೆಟ್ಟಿ ಮತ್ತು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಹಾಗೂ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಇದರ ಪದಾಧಿಕಾರಿಗಳು ದೀಪಪ್ರಜ್ವಲಿಸಿ ಉದ್ಘಾಟಿಸಿದರು.
Related Articles
Advertisement
ಸಂಪನ್ಮೂಲ ವ್ಯಕ್ತಿ ಸಂತೋಷ್ ನಾಯರ್ ಅವರು, ಪ್ರಸ್ತುತ ಮಾರುಕಟ್ಟೆಯ ರಹಸ್ಯಗಳನ್ನು ಸುಲಭ ಹಾಗೂ ಪರಿಣಾಮಕಾರಿ ಶೈಲಿಯಲ್ಲಿ ತಮ್ಮ ನಿರರ್ಗಳ ಮಾತುಗಳಿಂದ ತಿಳಿಸಿದರು. ಸಮಾಜದ ಪ್ರಸಿದ್ಧ ಉದ್ಯಮಿಗಳು, ವಿವಿಧ ಬಂಟ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ವಿವಿಧ ಕ್ಷೇತ್ರಗಳ ಗಣ್ಯರು ಶಿಬಿರದ ಪ್ರಯೋಜನ ° ಪಡೆದುಕೊಂಡರು.
ಎಲ್ಲ ಬಂಟ ಉದ್ಯಮಿಗಳನ್ನು ಹಾಗೂ ತಜ್ಞರನ್ನು ಒಂದೇ ವೇದಿಕೆಯಡಿಯಲ್ಲಿ ಒಗ್ಗೂಡಿಸುವುದು, ಔದ್ಯೋಗಿಕ ರಂಗದಲ್ಲಿ ಅಭಿವೃದ್ಧಿ ಸಾಧಿಸಲು ಉತ್ಸುಕರಾದ ಬಂಟ ಯುವ ಜನಾಂಗಕ್ಕೆ ಪ್ರೇರಣೆ ಯನ್ನು ಕಲ್ಪಿಸುವ ಶಿಬಿರಗಳನ್ನು ಆಯೋಜಿಸುವುದು ಇನ್ನಿತರ ಧ್ಯೇಯೋದ್ದೇಶಗಳೊಂದಿಗೆ ಸಂಸ್ಥೆಯು ಮುನ್ನಡೆಯುತ್ತಿರುವುದು ವಿಶೇಷತೆಯಾಗಿದೆ. ಬಂಟ ಸಮಾಜವು ಉದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಸಮಾಜವಾಗಿದ್ದು, ಈಗಾಗಲೇ ಹಲವಾರು ಮಂದಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಬೆಳೆಯುವ ಮತ್ತು ಬೆಳೆಯುತ್ತಿರುವ ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಬಂಟರ ಸಂಘ ಮುಂಬಯಿ ಹಾಗೂ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಇದರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉತ್ತಮ ರೀತಿಯಲ್ಲಿ ಸಹಕಾರ ನೀಡಿರುವುದು ಹೆಮ್ಮೆಯ ವಿಚಾರ. ಎರಡೂ ಸಂಸ್ಥೆಗಳ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ಈ ಶಿಬಿರದ ಸದುಪಯೋಗವನ್ನು ಸಮಾಜದ ಉದ್ಯಮಿಗಳು ಪಡೆದುಕೊಂಡು ಭವಿಷ್ಯದಲ್ಲಿ ಇನ್ನಷ್ಟು ಅಭಿವೃದ್ಧಿಯನ್ನು ಕಾಣಬೇಕು ಎಂಬುವುದೇ ನಮ್ಮ ಉದ್ದೇಶವಾಗಿದೆ – ಕೆ. ಸಿ. ಶೆಟ್ಟಿ (ಅಧ್ಯಕ್ಷರು : ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ) ಚಿತ್ರ-ವರದಿ : ಸುಭಾಷ್ ಶಿರಿಯಾ