Advertisement

Nutrition facts ಪೊರಕೆಯಲ್ಲಿ 150 ಕ್ಯಾಲೊರಿ: ನಗೆಬುಗ್ಗೆಯಲ್ಲಿ ತೇಲಿದ ನೆಟ್ಟಿಗರು!

09:19 PM Jul 22, 2024 | Team Udayavani |

ನವದೆಹಲಿ: ಆಹಾರ ಪದಾರ್ಥಗಳ ಪ್ಯಾಕೆಟ್‌ಗಳ ಮೇಲೆ ಕ್ಯಾಲೊರಿ, ನಾರಿನಾಂಶ ಇತ್ಯಾದಿ ಮಾಹಿತಿ ಇರುವುದು ನಮಗೆಲ್ಲಾ ತಿಳಿದೇ ಇದೆ. ಆದರೆ, ಕಸ ಗುಡಿಸುವ ಪೊರಕೆಯಲ್ಲೂ ಈ ಅಂಶಗಳು ಇದೆ ಎಂದರೆ ನಂಬುವಿರಾ? ಇದೇ ವಿಚಾರವೀಗ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಪೊರಕೆ ಪ್ಯಾಕೆಟ್‌ ಮೇಲೆ ಪ್ರಿಂಟ್‌ ಆಗಿರುವ ಈ ಅಂಶಗಳು ನೆಟ್ಟಿಗರನ್ನು ನಗೆ ಬುಗ್ಗೆಯಲ್ಲಿ ತೇಲಿಸಿದೆ.

Advertisement

ರೆಡ್ಡಿಟ್‌ ಬಳಕೆದಾರರೊಬ್ಬರು ಕಸಬರಿಕೆಯೊಂದರ ಕವರ್‌ ಸಮೇತ ಇರುವ ಫೋಟೋವನ್ನು ಪೋಸ್ಟ್‌ ಮಾಡಿದ್ದಾರೆ. ಕವರ್‌ನಲ್ಲಿ ನ್ಯೂಟ್ರಿಷಿಯನ್‌ ಫ್ಯಾಕ್ಟ್ ಎಂಬ ಕಾಲಂ ಕೂಡ ಪ್ರಿಂಟ್‌ ಆಗಿದೆ. ಅದರಲ್ಲಿ ಕ್ಯಾಲೊರಿ ಅಂಶ 150 ಎನ್ನುವುದರಿಂದ ಹಿಡಿದು ಫೈಬರ್‌ ಅಂಶ ಎಷ್ಟಿದೆ ಎಂಬ ಬಗ್ಗೆಯೂ ಬರೆಯಲಾಗಿದೆ.

ಹಲವು ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದು, “ಪೊರಕೆಯಲ್ಲಿ 150 ಕ್ಯಾಲೊರಿ ಎಂಬುದರ ಅರ್ಥ, ಒಂದು ಬಾರಿ ಪೊರಕೆಯಲ್ಲಿ ಕಸ ಗುಡಿಸಿದರೆ ನೀವು 150 ಕ್ಯಾಲೊರಿ ಕರಗಿಸಬಹುದು ಎಂಬುದಾಗಿದೆ’ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next