Advertisement

CAR-T ಥೆರಪಿ ಮೂಲಕ ಕ್ಯಾನ್ಸರ್‌ ಗೆದ್ದ ಭಾರತದ ಬಾಲಕ

01:46 AM Mar 31, 2024 | Team Udayavani |

ಲಂಡನ್‌: ಕ್ಯಾನ್ಸರ್‌ಪೀಡಿತ ಭಾರತೀಯ ಮೂಲದ ಯುವನ್‌ ಠಕ್ಕರ್‌(16) ಸಿಎಆರ್‌ ಟಿ ಥೆರಪಿ ಮೂಲಕ ಕ್ಯಾನ್ಸರ್‌ನಿಂದ ಗುಣಮುಖರಾದ ಬ್ರಿಟನ್‌ನ ಮೊದಲ ವ್ಯಕ್ತಿಯಾಗಿದ್ದಾರೆ. ಯುವನ್‌ ಅವರು ಲಂಡನ್‌ ಸಮೀಪದ ವ್ಯಾಟ್ಫೋ ರ್ಡ್‌ ನಿವಾಸಿ. “ಕ್ಯಾನ್ಸರ್‌ ದೃಢಪಟ್ಟ ಬಳಿಕ‌ ಅನೇಕ ಬಾರಿ ಆಸ್ಪತ್ರೆಗೆ ಅಲೆ ಯುವಂತಾಯಿತು.

Advertisement

ಶಾಲೆಯಿಂದ ದೀರ್ಘ‌ಕಾಲ ಹೊರಗುಳಿಯಬೇಕಾಯಿತು. ಆದರೆ ಟೆಸಾಜೆನ್ಲಕ್ಯುಸೆಲ್‌(ಕ್ರಿಮಿಯಾ) ಎಂಬ ಸಿಎಆರ್‌ ಟಿ ಥೆರಪಿಯಿಂದಾಗಿ ಈಗ ಗುಣ ಮುಖನಾಗಿದ್ದೇನೆ. ಈಗ ಮೊದಲಿನಂತೆ ನನ್ನ ಇಷ್ಟದ ಕೆಲಸಗಳನ್ನು ಮಾಡುತ್ತಿದ್ದೇನೆ’ ಎಂದು ಯುವನ್‌ ಠಕ್ಕರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next