ಕಂಪಾಲಾ: ಸಾಲ ಸಂಬಂಧಿಸಿದ ವಿವಾದದ ಹಿನ್ನೆಲೆ ಉಗಾಂಡದ ಪೊಲೀಸ್ ಅಧಿಕಾರಿ ಭಾರತೀಯ ಮೂಲದ ಬ್ಯಾಂಕ್ ಸಿಬ್ಬಂದಿ ಉತ್ತಮ್ ಭಂಡಾರಿ ಎಂಬುವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ.
Advertisement
ರಾಜಧಾನಿ ಕಂಪಾಲಾದಲ್ಲಿ ಟಿಎಫ್ಎಸ್ ಫೈನಾನ್ಶಿಯಲ್ ಸಂಸ್ಥೆಯ ಉದ್ಯೋಗಿಯಾಗಿರುವ ಉತ್ತಮ್ ಭಂಡಾರಿ ಹಾಗೂ ಪೊಲೀಸ್ ಅಧಿಕಾರಿ ಇವಾನ್ ವಬ್‌ವೈರ್ ಎಂಬಾತನ ನಡುವೆ ಸಾಲದ ವಿಚಾರವಾಗಿ ಮೇ 12ರಂದು ಮಾತಿನ ಚಕಮಕಿ ನಡೆದಿತ್ತು.
ಮಾತಿನ ಚಕಮಕಿ ಕೈಮೀರಿ ಸಹೋದ್ಯೋಗಿಯಿಂದ ಕಸಿದು ತಂದಿದ್ದ ಎಕೆ-47 ರೈಫಲ್‌ನಿಂದ ಭಂಡಾರಿ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆ ಬಳಿಕ ಪರಾರಿಯಾಗಿದ್ದ ಆತನನ್ನು ಸದ್ಯ ಬಂಧಿಸಲಾಗಿದೆ. ಗುಂಡು ಹಾರಾಟದ ವಿಡಿಯೋ ವೈರಲ್ ಆಗಿತ್ತು.