Advertisement

ಭಾರತದಿಂದ ಕ್ಲಸ್ಟರ್‌ ಬಾಂಬ್‌ ದಾಳಿಯೆಂದು ಸುಳ್ಳು ಹೇಳಿದ ಪಾಕಿಸ್ಥಾನ!

09:18 AM Aug 04, 2019 | mahesh |

ಹೊಸದಿಲ್ಲಿ: ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅರೆಸೇನಾಪಡೆಗಳನ್ನು ಕೇಂದ್ರ ಸರಕಾರ ನಿಯೋಜಿಸಿದ ಬೆನ್ನಲ್ಲೇ ಪಾಕಿಸ್ಥಾನ ಎಂದಿನಂತೆ ತನ್ನ ಸುಳ್ಳುಗಳ ಸರಮಾಲೆಯನ್ನು ಹೊರತೆಗೆದಿದ್ದು, ಭಾರತ ಕ್ಲಸ್ಟರ್‌ ಬಾಂಬ್‌ ದಾಳಿಯನ್ನು ನೀಲಂ ಕಣಿವೆಯಲ್ಲಿ ನಡೆಸಿದೆ ಎಂದು ಹೇಳಿದೆ. ಜನವಸತಿ ಪ್ರದೇಶದ ಮೇಲೆ ಈ ಬಾಂಬ್‌ ದಾಳಿಯನ್ನು ನಡೆಸಲಾಗಿದ್ದು ಹಾನಿಯಾಗಿದೆ. ಅಲ್ಲದೇ ಇಷ್ಟು ತೀವ್ರತೆಯ ಬಾಂಬ್‌ ದಾಳಿ ನಡೆಸುವ ಮೂಲಕ ಭಾರತ ಜಿನೇವಾ ಒಪ್ಪಂದವನ್ನು ಉಲ್ಲಂ ಸಿದೆ ಎಂದು ಹೇಳಿದೆ.

Advertisement

ಈ ಬಗ್ಗೆ ಪಾಕಿಸ್ಥಾನ ಸೇನೆಯ ವಕ್ತಾರ ಮೇ|ಜ| ಆಸಿಫ್ ಗಫ‌ೂರ್‌ ಟ್ವೀಟ್‌ ಮಾಡಿದ್ದು, ಭಾರತ ಅಂತಾರಾಷ್ಟ್ರೀಯ ಒಪ್ಪಂದ ಉಲ್ಲಂಘನೆ ಮಾಡಿದೆ. ಬಾಂಬ್‌ ದಾಳಿ ಮಾಡಿದೆ ಎಂದು ಹೇಳಿಕೊಂಡಿದ್ದರು. ಆದರೆ ಇದು ಸುಳ್ಳು ಎಂಬ ಶಂಕೆ ಬಲವಾಗಿದೆ. ಈ ವಿಚಾರದಲ್ಲಿ ಭಾರತ ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ ಬಳಿಕ ಟ್ವೀಟ್‌ ಮಾಡಿದ್ದು ಪಾಕ್‌ ನಿರಂತರವಾಗಿ ಗಡಿಯೊಳಕ್ಕೆ ಉಗ್ರರನ್ನು ನುಗ್ಗಿಸಲು ನೋಡುತ್ತಿದೆ. ಅವರನ್ನು ಬಗ್ಗುಬಡಿವ ಎಲ್ಲ ಆಯ್ಕೆಗಳನ್ನು ಮುಕ್ತವಾಗಿರಿಸಿದ್ದೇವೆ ಎಂದು ಹೇಳಿತ್ತು.

ಏನಿದು ಕ್ಲಸ್ಟರ್‌ ಬಾಂಬ್‌?
ಬಾಂಬ್‌ಗಳ ಗುತ್ಛ. ಒಂದು ದೊಡ್ಡ ಬಾಂಬ್‌ನ ಒಳಭಾಗದಲ್ಲಿ ಹಲವಾರು ಸಣ್ಣ ಬಾಂಬ್‌ಗಳು ಇರುತ್ತವೆ. ಸಾಮಾನ್ಯವಾಗಿ ದೊಡ್ಡ ಪ್ರದೇಶದಲ್ಲಿರುವ ಮಿಲಿಟರಿ ನೆಲೆ, ಶತ್ರು ರಾಷ್ಟ್ರದ ವಾಯುಪಡೆ ರನ್‌ವೇ ಇತ್ಯಾದಿಗಳನ್ನು ಧ್ವಂಸಗೊಳಿಸಲು ಕ್ಲಸ್ಟರ್‌ ಬಾಂಬ್‌ ಅನ್ನು ಪಡೆಗಳು ಉಪಯೋಗಿಸುತ್ತಾರೆ. ಇದರ ಬಳಕೆ ಕಡಿಮೆ. ಕ್ಲಸ್ಟರ್‌ ಬಾಂಬ್‌ ಪ್ರಯೋಗದಿಂದ ಅಪಾರ ಶಕ್ತಿ ಬಿಡುಗಡೆಯಾಗುತ್ತದೆ ಮತ್ತು ಇದರಿಂದ ಭಾರೀ ಹಾನಿಯಾಗುತ್ತದೆ.

ಪಾಕ್‌ ಹೇಳಿಕೆ ಸುಳ್ಳು ಯಾಕೆ?
ಕ್ಲಸ್ಟರ್‌ ಬಾಂಬ್‌ನಿಂದ ಭಾರೀ ಹಾನಿ: ಕ್ಲಸ್ಟರ್‌ ಬಾಂಬ್‌ ಪ್ರಯೋಗಿಸಿದ್ದೇ ಆದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುತ್ತದೆ. ಒಂದು ಬಾಂಬ್‌ನಿಂದಾಗಿ ಸುಮಾರು 65 ಅಡಿ ಸುತ್ತಳತೆಯಲ್ಲಿ ತೀವ್ರ ಹಾನಿಯಾಗುತ್ತದೆ. ಒಂದು ವೇಳೆ ಭಾರತ ಬಾಂಬ್‌ ದಾಳಿ ನಡೆಸಿದ್ದೇ ಆದಲ್ಲಿ ಈ ಹಾನಿ ಪ್ರಮಾಣ ಹೆಚ್ಚುತ್ತಿತ್ತು. ಆದರೆ ಹಾನಿಯ ಪ್ರಮಾಣದ ಬಗ್ಗೆ ಪಾಕಿಸ್ಥಾನ ಹೆಚ್ಚೇನೂ ಹೇಳಿಕೊಂಡಿಲ್ಲ.

ಬಾಂಬ್‌ ಚಿತ್ರ: ಪಾಕ್‌ ಸಾಮಾಜಿಕ ಜಾಲತಾಣದಲ್ಲಿ ಬಿಡಗಡೆ ಮಾಡಿದ ಬಾಂಬ್‌ ಚಿತ್ರವನ್ನು ಸರಿಯಾಗಿ ಭಿನ್ನ ಆ್ಯಂಗಲ್‌ಗ‌ಳಲ್ಲಿ ತೆಗೆದಿಲ್ಲ. ಜತೆಗೆ ಬಾಂಬ್‌ ಭಾರತದ್ದೇ ಎನ್ನಲು ಅದರಲ್ಲಾವುದೇ ಸೀಲ್‌, ತಯಾರಿಕೆ ವಿವರಗಳನ್ನು ತೋರಿಸಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next