ಲಡಾಖ್: ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಗೆ ಯುದ್ಧ ಸಾಮಗ್ರಿ ಒಯ್ಯಲು, ಗಸ್ತು ತಿರುಗಲು 2 ಡುಬ್ಬಗಳ ಒಂಟೆಗಳನ್ನು ಬಳಸಿಕೊಳ್ಳಲು ಸೇನೆ ಮುಂದಾಗಿದೆ.
ಲಡಾಖ್‌ನ ಪೂರ್ವ ಭಾಗದ ದೌಲತ್‌ಬಾಗ್ ಓಲ್ಡಿ ಮತ್ತು ಡೆಪ್ಸಾಂಗ್‌ನಲ್ಲಿ ಇವು ನಿಯೋಜನೆಗೊಳ್ಳಲಿವೆ.
ಎತ್ತರದ ಶಿಖರಗಳಲ್ಲಿ ಇವು ಏಕಕಾಲಕ್ಕೆ 170 ಕೆ.ಜಿ. ತೂಕದ ಸಾಮಗ್ರಿಗಳನ್ನು ಒಯ್ಯಬಲ್ಲವು.
ಲಡಾಖ್‌ನ ಅವಳಿ ಡುಬ್ಬದ ಒಂಟೆಗಳು ಸಮರ್ಥವಾಗಿ ದುರ್ಗಮ ಬೆಟ್ಟಗಳನ್ನು ಹತ್ತಿಳಿಯುತ್ತವೆ ಎಂಬುದು ಡಿಆರ್‌ಡಿಒಯ ಪರೀಕ್ಷೆಯಲ್ಲಿ ಸಾಬೀತಾಗಿದೆ.
ಈ ಭಾಗದಲ್ಲಿ ಚೀನಾ ಮತ್ತು ಭಾರತಗಳ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಈ ಸನ್ನಿವೇಶದಲ್ಲಿ 17ಸಾವಿರ ಅಡಿಗಳಿಗಿಂತಲೂ ಎತ್ತರದಲ್ಲಿರುವ ದೌಲತ್ ಬೇಗ್ ಓಲ್ಡೀ ಅಥವಾ ಡಿಬಿಒ ಮತ್ತು ಡೆಪ್ಸಾಂಗ್ ಪ್ರದೇಶಗಳಲ್ಲಿ ಈ ಒಂಟೆಗಳನ್ನು ಬಳಸಿಕೊಳ್ಳಲು ಭಾರತೀಯ ಸೇನೆ ನಿರ್ಧರಿಸಿರುವುದು ಹಲವಾರು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.
ಅವಳಿ ಡುಬ್ಬಗಳ ಈ ಒಂಟೆಯನ್ನು ಬ್ಯಾಕ್ಟ್ರಿಯನ್ ಒಂಟೆ ಎಂದೂ ಕರೆಯುತ್ತಾರೆ. ಮತ್ತು ಈ ಒಂಟೆಗಳು ಲಢಾಕ್ ನಲ್ಲಿ 12 ಸಾವಿರ ಅಡಿಗಳಿಗಿಂತಲೂ ಎತ್ತರದಲ್ಲಿರುವ ನುಬ್ರಾ ಕಣಿವೆ ಭಾಗಗಳಲ್ಲಿ ಕಾಣಸಿಗುತ್ತವೆ.
ಮತ್ತು ಇವುಗಳ ಸಾಮರ್ಥ್ಯ ಹಾಗೂ ಕೌಶಲದ ಕುರಿತು ಲೇಹ್ ನಲ್ಲಿರುವ ಹೈ ಆಟ್ಯಿಟ್ಯೂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಸಂಶೋಧನೆಯನ್ನು ನಡೆಸಲಾಗಿದೆ.