ಹೊಸದಿಲ್ಲಿ : ಭಾರತೀಯ ಸೇನೆ ಇದೇ ಮೊದಲ ಬಾರಿಗೆ 800 ಮಹಿಳೆಯರನ್ನು ಸೇನಾ ಪೊಲೀಸ್ ಪಡೆಗೆ ನೇಮಿಸಿಕೊಳ್ಳಲಿದೆ.
ವರ್ಷಂಪ್ರತಿ 52 ಮಹಿಳೆಯರನ್ನು ಭಾರತೀಯ ಸೇನೆ ನೇಮಕ ಮಾಡಿಕೊಳ್ಳಲಿದೆ ಎಂದು ಸೇನಾ ಮುಖ್ಯಸ್ಥ ಲೆ| ಜ| ಬಿಪಿನ್ ರಾವತ್ ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆ ಸೇನಾ ಮುಖ್ಯಸ್ಥ ರಾವತ್ ಅವರು ಮಹಿಳಾ ಕೆಡೆಟ್‌ಗಳನ್ನು ಮಿಲಿಟರಿ ಪೊಲೀಸ್ ಪಡೆಗೆ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದ್ದರು. ಅಂತೆಯೇ ಸೇನೆ ಇದೀಗ ದೀರ್ಘಕಾಲದಿಂದ ಬಾಕಿ ಉಳಿದಿರುವ ಈ ಪ್ರಸ್ತಾವವನ್ನು ಅಂತಿಮಗೊಳಿಸಿದೆ.
ಆ ಪ್ರಕಾರ 800 ಮಹಿಳೆಯರನ್ನು ಸೇನಾ ಪೊಲೀಸ್ ಪಡೆಯ ಅಧಿಕಾರಿಯೇತರ ವರ್ಗಕ್ಕೆ ಮುಂದಿನ ಕೆಲ ವರ್ಷಗಳಲ್ಲಿ 800 ಮಹಿಳೆಯರನ್ನು ಭರ್ತಿ ಮಾಡಿಕೊಳ್ಳಲಿದೆ.
ದೇಶದ ಪೂರ್ಣ ಪ್ರಮಾಣದ ರಕ್ಷಣಾ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ಒಂದು ದಿನದ ತರುವಾಯವೇ ನಿರ್ಮಲಾ ಸೀತಾರಾಮನ್ ಅವರು ಸೇನೆಗೆ ಮಹಿಳೆಯರನ್ನು ನೇಮಿಸಿಕೊಳ್ಳಲಾಗುವುದೆಂದು ಪ್ರಕಟಿಸಿದ್ದರು.
ಸೇನೆಯ ಎಜುಟಾಂಟ್ ಜನರಲ್ ಲೆ| ಜ| ಅಶ್ವನಿ ಕುಮಾರ್ ಅವರು ಈ ನಿಟ್ಟಿನಲ್ಲಿ ಸೇನೆಯ ದ್ವೆ„ವಾರ್ಷಿಕ ಶೃಂಗದಲ್ಲಿ ಈ ಕುರಿತ ಪ್ರಕಟನೆಯನ್ನು ಹೊರಡಿಸಿ ವರ್ಷಂಪ್ರತಿ ಇನ್ನು 52 ಮಹಿಳೆಯರನ್ನು ಮಿಲಿಟರಿ ಪೊಲೀಸ್ ಪಡೆಗೆ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.