Advertisement

Indian Army: ಹಿಮಾಪಾತವನ್ನೂ ಲೆಕ್ಕಿಸದೆ ಗರ್ಭಿಣಿಯ ರಕ್ಷಿಸಿದ ಸೇನೆ

10:36 PM Feb 04, 2024 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ತೀವ್ರ ಹಿಮಪಾತವಾಗುತ್ತಿದ್ದು ಜನರು ಮನೆಯಿಂದ ಹೊರಗೆ ಕಾಲಿಡಲೂ ಯೋಚಿಸುವಂಥ ಪರಿಸ್ಥಿತಿ ಇದೆ. ಅಂಥ ಪರಿಸ್ಥಿತಿಯ ನಡುವೆಯೂ ಭಾರತೀಯ ಸೇನೆಯ ಯೋಧರು ಜನಸಾಮಾನ್ಯರ ಕರೆಗೆ ಮಿಡಿದಿದ್ದು, ರಾತ್ರೋ ರಾತ್ರಿ ಗರ್ಭಿಣಿಯೊಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ವಿಲಗಂನ ಕರ್ಕೋಸಾದಲ್ಲಿರುವ ಸೇನಾ ಕ್ಯಾಂಪ್‌ಗೆ ರಾತ್ರಿ 10.40 ರ ಸಮಯದಲ್ಲಿ ಗರ್ಭಿಣಿಯೊಬ್ಬರಿಗೆ ತುರ್ತು ವೈದ್ಯಕೀಯ ನೆರವು ಹಾಗೂ ಆಸ್ಪತ್ರೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿಕೊಡಬೇಕಾಗಿ ವಿನಂತಿಸಿಕೊಂಡು ಕರೆಯೊಂದು ಬಂದಿದೆ. 2 ದಿನಗಳಿಂದಾಗಿದ್ದ ಹಿಮಪಾತದಿಂದಾಗಿ ಖನ್ಬಾಲ್‌ ಮತ್ತು ವಿಲಗಂ ನಡುವಿನ ರಸ್ತೆ ಮುಚ್ಚಿಹೋಗಿತ್ತು. ಆದರೂ, ಎದೆಗುಂದದರೆ ತಕ್ಷಣವೇ ಸೇನಾ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಮಹಿಳೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next