Advertisement

ಫೆ.20 : ಹಿರಿಯಡಕದಲ್ಲಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಭೆ

10:38 AM Feb 20, 2019 | Karthik A |

ಉಡುಪಿ: ಇತ್ತೀಚಿಗೆ ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರಿಂದ ನಡೆದ ಆತ್ಮಾಹುತಿ ದಾಳಿಯಲ್ಲಿ ವೀರಮರಣವನ್ನಪ್ಪಿದ ದೇಶದ ಹೆಮ್ಮೆಯ ಸೈನಿಕರ ಆತ್ಮಕ್ಕೆ ಶಾಂತಿ ಕೋರುವ ಸಲುವಾಗಿ ಹಿರಿಯಡಕದ ಸಮಸ್ತ ನಾಗರಿಕರು ಇದೇ ಫೆಬ್ರವರಿ 20ರ ಬುಧವಾರ ಸಾಯಂಕಾಲ 7 ಗಂಟೆಗೆ ಹಿರಿಯಡಕದ ಬಸ್ ನಿಲ್ದಾಣದ ಬಳಿ ಶ್ರದ್ಧಾಂಜಲಿ ಸಭೆಯನ್ನು ನಡೆಸಲು ತೀರ್ಮಾನಿಸಿದ್ದಾರೆ.

Advertisement

ಸಭೆಗೆ ಪೂರ್ವಭಾವಿಯಾಗಿ ಹಿರಿಯಡ್ಕ ದೇವಸ್ಥಾನದ ಬಾಕಿಮಾರಿನಿಂದ ಸಾರ್ವಜನಿಕರು ದೀಪಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬರಲಿದ್ದಾರೆ. ಬಳಿಕ ಹಿರಿಯಡಕದ ಬಸ್ ನಿಲ್ದಾಣದ ಬಳಿ ಸಭೆ ಸೇರುವುದಾಗಿ ನಿರ್ಧರಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಈ ಮೂಲಕ ವಿನಂತಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next