Advertisement

ಯೇತಿ ಹೆಜ್ಜೆ ಗುರುತು! ಭಾರತೀಯ ಸೇನೆಯಿಂದ ಬಹಿರಂಗ

03:32 AM May 01, 2019 | Sriram |

ಹೊಸದಿಲ್ಲಿ: ಜನಸಾಮಾನ್ಯರಿಗೆ, ವಿಜ್ಞಾನಿಗಳಿಗೆ ದಶಕಗಳಿಂದ ನಿಗೂಢವಾಗಿರುವ “ಯೇತಿ’ (ಮಾನವನನ್ನು ಹೋಲುವ ದೈತ್ಯ ಜೀವಿ) ಹೆಜ್ಜೆಯ ಗುರುತೊಂದು ಪತ್ತೆಯಾಗಿರುವುದಾಗಿ ಭಾರತೀಯ ಸೇನೆ ಹೇಳಿಕೊಂಡಿದೆ.

Advertisement

ನೇಪಾಲದ ಮಕಾಲು ಬೇಸ್‌ ಕ್ಯಾಂಪ್‌ನಲ್ಲಿದ್ದ ಭಾರತೀಯ ಸೇನೆಯ ಪರ್ವತಾರೋಹಿಗಳುಳ್ಳ ತಂಡವೊಂದಕ್ಕೆ ಎ. 9ರಂದು ಈ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದು, ಪ್ರತಿ ಗುರುತು 32 ಇಂಚು ಉದ್ದ ಹಾಗೂ 15 ಇಂಚು ಅಗಲವಿದೆ ಎಂದು ಭಾರತೀಯ ಸೇನೆ ತನ್ನ ಟ್ವಿಟರ್‌ ಖಾತೆಯಲ್ಲಿ ಹೇಳಿಕೊಂಡಿದೆ. ಜತೆಗೆ ಆ ಗುರುತುಗಳ ಚಿತ್ರವನ್ನೂ ಪ್ರಕಟಿಸಿದೆ.

ಹಿಮಾಚ್ಛಾದಿತ ಪ್ರದೇಶಗಳಲ್ಲಿ ಮನುಷ್ಯನನ್ನು ಹೋಲುವ ದೈತ್ಯಾಕಾರದ ದ್ವಿಪಾದಿ ಪ್ರಾಣಿಯೊಂದು ಹಲವರಿಗೆ ಕಾಣಿಸಿ ಕೊಂಡಿರುವ ಬಗ್ಗೆ ಹಲವಾರು ವದಂತಿಗಳು ದಶಕಗಳಿಂದ ಚಾಲ್ತಿಯಲ್ಲಿದೆ. ಆದರೆ ಸೂಕ್ತ ಫೋಟೋ, ವೀಡಿಯೋಗಳಂಥ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ.

ಟ್ವಿಟರ್‌ನಲ್ಲಿ ಟೀಕೆ: ಭಾರತೀಯ ಸೇನೆಯು ಮಾಡಿರುವ ಯೇತಿ ಕುರಿತಾದ ಟ್ವೀಟ್‌, ಸಂಶೋಧನಾ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ಚುನಾವಣ ಪರ್ವದಲ್ಲಿರುವ ಭಾರತದಲ್ಲಿ ಇದು ಸಾಮಾಜಿಕ ಜಾಲತಾಣದಲ್ಲಿ ಟೀಕಾಸ್ತ್ರವಾಗಿ ಪ್ರಯೋಗವಾಗಿದೆ. ಇದನ್ನು ಪ್ರಧಾನಿ ಮೋದಿ ವಿರುದ್ಧದ ಟೀಕೆಗೆ ಬಳಸಿಕೊಂಡಿರುವ ಉತ್ತರ ಪ್ರದೇಶದ ಮಾಜಿ ಸಿಎಂ ಅಖೀಲೇಶ್‌ ಯಾದವ್‌, “ಮೋದಿಯವರ ಅಚ್ಛೇದಿನ್‌ಗಳು ಯೇತಿಗಿಂತಲೂ ನಿಗೂಢವಾಗಿವೆ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next