Advertisement

ಲಡಾಖ್ ನಲ್ಲಿ ಭಾರತೀಯ ಯೋಧರನ್ನು ಚೀನಾ ಬಂಧಿಸಿಲ್ಲ: ಭಾರತೀಯ ಸೇನೆ

11:47 AM May 24, 2020 | Nagendra Trasi |

ನವದೆಹಲಿ: ಲಡಾಖ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭಾರತೀಯ ಯೋಧರನ್ನು ಚೀನಾಪಡೆ ಬಂಧಿಸಿದೆ ಎಂಬ ವರದಿಯನ್ನು ಭಾರತೀಯ ಸೇನಾ ಅಲ್ಲಗಳೆದಿದೆ. ಕಳೆದ ವಾರ ನಡೆದ ಘರ್ಷಣೆಯಲ್ಲಿ ಚೀನಾಪಡೆ ಭಾರತೀಯ ಯೋಧರನ್ನು ಕೆಲಕಾಲ ಬಂಧಿಸಿ ಬಿಡುಗಡೆ ಮಾಡಿತ್ತು ಎಂದು ವರದಿಯಾಗಿತ್ತು.

Advertisement

ಲಡಾಖ್ ನಲ್ಲಿ ಭಾರತೀಯ ಸೈನಿಕರು ಮತ್ತು ಇಂಡೋ ಟಿಬೇಟಿಯನ್ನು ಬಾರ್ಡರ್ ಪೊಲೀಸ(ಐಟಿಬಿಪಿ)ರನ್ನು ಚೀನಾಪಡೆ ಕೆಲಕಾಲ ಬಂಧಿಸಿ ಬಿಡುಗಡೆಗೊಳಿಸಿತ್ತು ಎಂದು ವರದಿ ವಿವರಿಸಿತ್ತು.

ಭಾರತೀಯ ಸೇನೆ ಮತ್ತು ಚೀನಾ ಸೇನೆ ಮುಖಾಮುಖಿಯಾದಾಗ ಘರ್ಷಣೆ ನಡೆದಿತ್ತು. ಆದರೆ ಬಂಧಿಸಿದ್ದರು ಎಂಬುದು ಸಮರ್ಪಕವಾದ ಮಾಹಿತಿಯಲ್ಲ ಎಂದು ಹೇಳಿದೆ.

ಚೀನಾ ಆಕ್ರಮಿತ ಲಡಾಖ್ ನ ಗಾಲ್ವಾನ್ ನದಿ ಪ್ರದೇಶದಲ್ಲಿ ಭಾರತೀಯ ಸೇನೆ ಮತ್ತು ಚೀನಾ ಸೇನೆ ಮುಖಾಮುಖಿಯಾಗಿತ್ತು. ಅಲ್ಲದೇ ಭಾರತೀಯ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಚೀನಾ ಸೈನಿಕರು ಮುಂದಾದ ವೇಳೆ ಭಾರತೀಯ ಸೇನೆ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ ವಾರ ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next