Advertisement

ಸೇನಾ ಸಮವಸ್ತ್ರಕ್ಕೆ ಸಿಕ್ಕಿತು ಕೃತಿಸ್ವಾಮ್ಯ

07:18 PM Nov 03, 2022 | Team Udayavani |

ನವದೆಹಲಿ: ಭಾರತೀಯ ಸೇನೆಗೆ ಹೊಸತಾಗಿ ವಿನ್ಯಾಸ ಮಾಡಿದ ಸಮವಸ್ತ್ರದ ವಿನ್ಯಾಸ ಮತ್ತು ಅದರ ಕೃತಿಸ್ವಾಮ್ಯವನ್ನು ನೋಂದಣಿ ಮಾಡಲಾಗಿದೆ. ಹೀಗಾಗಿ, ಇನ್ನು ಮುಂದೆ ಅದೇ ಮಾದರಿಯ ವಸ್ತ್ರ ವಿನ್ಯಾಸವನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ರಕ್ಷಣಾ ಸಚಿವಾಲಯ ನವದೆಹಲಿಯಲ್ಲಿ ತಿಳಿಸಿದೆ.

Advertisement

ಕೋಲ್ಕತಾದಲ್ಲಿ ಇರುವ ವಿನ್ಯಾಸ ಮತ್ತು ಟ್ರೇಡ್‌ಮಾರ್ಕ್‌ನ ಮಹಾನಿರ್ದೇಶನಾಲಯಗಳ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಪೂರ್ತಿಗೊಳಿಸಿ, ಅ.21ರಂದೇ ಈ ಬಗ್ಗೆ ಆದೇಶ ಹೊರಡಿಸಲಾಗಿದೆ. ಇದರಿಂದಾಗಿ ಸಮವಸ್ತ್ರದ ವಿನ್ಯಾಸದ ಹಕ್ಕು ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ. ಹೊಸ ಸಮವಸ್ತ್ರದ ಉತ್ಪಾದನೆಯೂ ಶುರುವಾಗಿ, 50 ಸಾವಿರ ಜತೆಯನ್ನು ವಿತರಿಸಲಾಗಿದೆ. ಜ.15ರಂದು ಹೊಸ ವಿನ್ಯಾಸವನ್ನು ಅನಾವರಣಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next