ನವದೆಹಲಿ : ಭಾರತೀಯ ಸೇನೆಯ ನಿರ್ಗಮನ ಪಥಸಂಚಲನ ಸೇರಿದಂತೆ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಹಿಂದಿ ರಚನೆಯನ್ನೊಳಗೊಂಡ ಪ್ರಾದೇಶಿಕ ಗೀತೆ ಅಳವಡಿಸಲು ರಕ್ಷಣಾ ಇಲಾಖೆ ಸಜ್ಜಾಗಿದೆ. ಮಿಲಿಟರಿ ಬ್ಯಾಂಡ್‌ನ ತಾಳಕ್ಕೆ ಹೊಂದಿಕೆ ಆಗಬಲ್ಲಂಥ ಹೊಸ ಹಾಡನ್ನು ಸೇನೆಯ ರಿಕ್ವೆಸ್ಟ್ ಫಾರ್ ಪ್ರೊಪೊಸಲ್‌ನ ತಂಡ ಶೀಘ್ರವೇ ಅಂತಿಮಗೊಳಿಸಲಿದೆ.
ಪ್ರಸ್ತುತ ಮಿಲಿಟರಿಯಲ್ಲಿ ಬ್ರಿಟಿಷ್ ಆಡಳಿತ ಅಳವಡಿಸಿದ ಗೀತೆಗಳ ಟ್ಯೂನ್‌ಗಳನ್ನು ನುಡಿಸಲಾಗುತ್ತಿದೆ. ಸೇನೆಯ ಭಾರತೀಕರಣದ ಭಾಗವಾಗಿ, ಈ ಹಾಡನ್ನು ತೆಗೆದು, ಸ್ವದೇಶಿ ಗೀತೆ ಅಳವಡಿಕೆಗೆ ಯೋಜಿಸಲಾಗಿದೆ. ದೇಶಭಕ್ತಿ ಮತ್ತು ಮಿಲಿಟರಿ ಶಕ್ತಿ ಬಣ್ಣಿಸುವಂಥ 3 ಅಂತಿಮ ಹಾಡುಗಳನ್ನು ಸಲ್ಲಿಸಲು ಪ್ರಮುಖ ಮ್ಯೂಸಿಕ್ ಸಂಸ್ಥೆ ಜತೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಹಾಡುಗಳು ಸಲ್ಲಿಕೆಯಾದ 30 ದಿನಗಳೊಳಗೆ, ಟ್ಯೂನನ್ನು ಪ್ರಯೋಗಾರ್ಥವಾಗಿ ಬಳಸಲಾಗುತ್ತದೆ.
ಬ್ರಿಟಿಷ್ ಗೀತೆಗಳಗೆ ಕೊಕ್: ಸೇನಾ ಸಮಾರಂಭಗಳಲ್ಲಿ ಚಾಲ್ತಿಯಲ್ಲಿರುವ ಬ್ರಿಟಿಷ್ ಮೂಲದ ಹಲವು ಟ್ಯೂನ್‌ಗಳಿಗೆ ಕೊಕ್ ಸಿಗುವ ಸಾಧ್ಯತೆ ಇದೆ. ಪ್ರಸ್ತುತ “ಆಲ್ಡ್ ಲ್ಯಾಂಗ್ ಸೈನ್…’, “ಅಬಿಡ್ ವಿತ್ ಮಿ…’ ಮುಂತಾದ ಹಾಡುಗಳನ್ನು ವಿವಿಧ ಮಿಲಿಟರಿ ಅಕಾಡೆಮಿಗಳಲ್ಲಿ, ಸೇನೆಯ ಪಥ ಸಂಚಲನಗಳಲ್ಲಿ ನುಡಿಸಲಾಗುತ್ತಿದೆ. “ಅಬಿಡ್ ವಿತ್ ಮಿ…’ ಹಾಡನ್ನು ಕೈಬಿಟ್ಟು, “ವಂದೇ ಮಾತರಂ’ ಅಳವಡಿಕೆಯ ಪ್ರಸ್ತಾಪ ಕಳೆದ ವರ್ಷ ಕೇಳಿಬಂದಿತ್ತು. ಬ್ಯಾಂಡ್‌ಮಾರ್ಚ್‌ನಲ್ಲಿ ದೇಶದ ಐಕ್ಯತೆ ಸಾರುವ “ಸಾರೇ ಜಹಾನ್ ಸೆ ಅಚ್ಚಾ’ ಬಳಕೆಯಲ್ಲಿದ್ದು, ಇದನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ :ಕೋವಿಡ್: ರಾಜ್ಯದಲ್ಲಿಂದು 889 ಹೊಸ ಪ್ರಕರಣ ಪತ್ತೆ|1080 ಜನ ಸೋಂಕಿತರು ಗುಣಮುಖ
ನೂತನ ಹಾಡನ್ನು ಹುತಾತ್ಮ ಯೋಧರು ಮತ್ತು ಅವರ ಕುಟುಂಬಗಳಿಗೆ ಸಮರ್ಪಿಸಲು ಸೇನೆ ನಿರ್ಧರಿಸಿದೆ.
ಸೇನೆಯ ಅಪೇಕ್ಷೆಗಳೇನು?
– ಯೋಧರ ತ್ಯಾಗ, ಸಮರ್ಪಣೆ, ದೇಶಭಕ್ತಿ ಬಿಂಬಿಸುವ ಧ್ವನಿ ಗೀತೆಯಲ್ಲಿರಬೇಕು.
– ಕಾಲಾತೀತ, ಕಲಾತ್ಮಕ ಆಕರ್ಷಣೆ ಹೊಂದಿರಬೇಕು.
– ಮಿಲಿಟರಿ ಬ್ಯಾಂಡ್‌ಗೆ ಹೊಂದಿಕೆ ಆಗುವಂತಿರಬೇಕು.