Advertisement

ಉತ್ತರ ಸಿಕ್ಕಿಂ: ಹಿಮಬಂಡೆ ಕುಸಿದು ಬಿದ್ದು ಲೆಫ್ಟಿನೆಂಟ್ ಕರ್ನಲ್ ಹಾಗೂ ಯೋಧ ಹುತಾತ್ಮ

08:30 AM May 16, 2020 | Nagendra Trasi |

ಸಿಕ್ಕಿಂ: ಉತ್ತರ ಸಿಕ್ಕಿಂನ ಸೇನಾ ನೆಲೆ ಮೇಲೆ ಹಿಮಗಡ್ಡೆ ಉರುಳಿ ಬಿದ್ದ ಪರಿಣಾಮ ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿರುವ ಘಟನೆ ನಡೆದಿದೆ.

Advertisement

ಇಬ್ಬರು ಯೋಧರು ಸಾವನ್ನಪ್ಪಿರುವುದನ್ನು ಸೇನೆ ಖಚಿತಪಡಿಸಿದೆ. ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿಎ ಹಾಗೂ ಎಸ್ ಷಣ್ಮುಖ್ ರಾವ್ ಹಿಮಗಡ್ಡೆ ಉರುಳಿ ಬಿದ್ದು ವಿಧಿವಶರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹಿಮಪಾತದೊಳಕ್ಕೆ ಸಿಕ್ಕಿಬಿದ್ದ ಲೆಫ್ಟಿನೆಂಟ್ ರಾಬರ್ಟ್ ಹಾಗೂ ಸುರಂಗಕಾರ ಷಣ್ಮುಖ್ ರಾವ್ ಅವರನ್ನು ರಕ್ಷಿಸಲು ಯೋಧರ ರಕ್ಷಣಾ ತಂಡ ತುಂಬಾ ಶ್ರಮಪಟ್ಟಿತ್ತು. ಆದರೆ ಇಬ್ಬರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಶಿಬಿರದಲ್ಲಿದ್ದ ಉಳಿದವರೆಲ್ಲಾ ಸುರಕ್ಷಿತರಾಗಿದ್ದಾರೆ ಎಂದು ಪ್ರಕಟಣೆ ವಿವರಿಸಿದೆ.

ಸೇನಾ ಪಹರೆ ಪಡೆ ಮತ್ತು ಹಿಮಪಾತ ತೆರವುಗೊಳಿಸುವ ಸುಮಾರು 18 ಮಂದಿ ಇದ್ದ ಶಿಬಿರದ ಮೇಲೆ ಹಿಮಬಂಡೆ ಕುಸಿದು ಬಿದ್ದಿತ್ತು. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಉಳಿದ ಹದಿನಾರು ಮಂದಿ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next