Advertisement

ಪಾಕ್ ನಿಂದ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ: ಭಾರತೀಯ ಯೋಧ ಹುತಾತ್ಮ !

07:59 AM Sep 16, 2020 | Mithun PG |

ಜಮ್ಮುಕಾಶ್ಮೀರ: ಗಡಿನಿಯಂತ್ರಣ ರೇಖೆಯ ಬಳಿ(ಎಲ್ಒಸಿ) ಪಾಕಿಸ್ತಾನ ಸೇನೆ ಕದನವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ್ದರಿಂದ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಮಾತ್ರವಲ್ಲದೆ ಅಧಿಕಾರಿಯೊಬ್ಬರು ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ.

Advertisement

ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿನಿಯಂತ್ರಣ ರೇಖೆಯ ಬಳಿ ಪಾಕ್ ಸೇನೆ ಮಂಗಳವಾರ (15-9-2020)ರಾತ್ರಿ ಗುಂಡಿನ ದಾಳಿ ನಡೆಸಿದೆ.  ಮಂಗಳವಾರ ಮಧ್ಯಾಹ್ನ ಕೂಡ ಪಾಕಿಸ್ಥಾನ ಸೇನೆ ಸುಂದರ್ ಬಾನಿ ಸೆಕ್ಟರ್ ನ ಎಲ್ಓಸಿ ಉದ್ದಕ್ಕೂ ಶೆಲ್ ದಾಳಿ ಮತ್ತು ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಭಾರತೀಯ ಸೇನೆಯ ತಕ್ಕ ಪ್ರತ್ಯುತ್ತರ ನೀಡಿದರೂ ಅಧಿಕಾರಿ ಸೇರಿದಂತೆ ಮೂವರು ಸೈನಿಕರು ಗಾಯಗೊಂಡಿದ್ದರು.  ಇದೀಗ ಗಾಯಗೊಂಡ ಯೋಧರು ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವರ್ಷದಲ್ಲಿ (ಜನವರಿ 1 ರಿಂದ ಸೆಪ್ಟೆಂಬರ್ 7 ರವರೆಗೆ) ಜಮ್ಮು ಪ್ರದೇಶದ ನಿಯಂತ್ರಣ ರೇಖೆಯಲ್ಲಿ 3,186 ಬಾರಿ ಕದನ ವಿರಾಮ ಉಲ್ಲಂಘನೆ ನಡೆದಿದೆ ಎಂದು ಕೇಂದ್ರ ಸೆಪ್ಟೆಂಬರ್ 14 ರಂದು ತಿಳಿಸಿತ್ತು. ಇದಲ್ಲದೆ, ಈ ವರ್ಷ (ಜನವರಿ 1 ರಿಂದ ಆಗಸ್ಟ್ 31 ರವರೆಗೆ) ಜಮ್ಮು ಪ್ರದೇಶದ ಇಂಡೋ-ಪಾಕ್ ಅಂತರರಾಷ್ಟ್ರೀಯ ಗಡಿಯಲ್ಲಿ 242 ಗಡಿಯಾಚೆಗಿನ ಗುಂಡಿನ ದಾಳಿಗಳು ಸಂಭವಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next