ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಸೇನೆಯು ಎಲ್ಲ ಯೋಧರಿಗೆ, ಅಧಿಕಾರಿಗಳಿಗೆ ಅವರವರ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಖಾತೆಗಳು ಸಹಿತ ಸುಮಾರು 80 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸುವಂತೆ ಅಥವಾ ರದ್ದು ಗೊಳಿಸುವಂತೆ ಆದೇಶಿಸಿದೆ.
13 ಲಕ್ಷದಷ್ಟಿರುವ ಯೋಧರು ಜು. 15ರೊಳಗೆ ಆದೇಶ ಪಾಲಿಸ ಬೇಕು. ತಪ್ಪಿದರೆ ಶಿಸ್ತು ಕ್ರಮ ಕೈಗೊಳ್ಳು ವುದಾಗಿಯೂ ಸೇನೆ ಎಚ್ಚರಿಕೆ ನೀಡಿದೆ.
ಭಾರತೀಯ ಯೋಧರ, ಅಧಿಕಾರಿ ಗಳ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಹಾಗೂ ಮಹತ್ವವಾದ ಮಾಹಿತಿಗಳು ಸೋರಿಕೆಯಾಗುತ್ತಿರುವುದು ಸೇನೆಯ ಗಮನಕ್ಕೆ ಬಂದಿತ್ತು.
ಕಳೆದ ಎರಡು - ಮೂರು ವರ್ಷಗಳಲ್ಲಿ ಪಾಕಿಸ್ಥಾನದ ಐಎಸ್‌ಐ ಏಜೆಂಟ್‌ಗಳು ಭಾರತೀಯ ಯೋಧರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿ ಹಲವಾರು ಮಹತ್ವದ ಮಾಹಿತಿ ಗಳನ್ನು ಕದಿಯಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಇವನ್ನೆಲ್ಲ ತಡೆಗಟ್ಟಲು ಈ ನಿರ್ಣಯಕ್ಕೆ ಬರಲಾಗಿದೆ.