ವಾಷಿಂಗ್ಟನ್ : ಭಾರತೀಯ ಅಮೇರಿಕನ್ನರು ಅಮೆರಿಕಾದ ಮೇಲೆ ಹಿಡಿತ ಸಾಧಿಸುತ್ತಾರೆ ಎಂದು ಅಮೆರಿಕಾದ ನೂತನ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಅವರು ತಮ್ಮ ಆಡಳಿತದಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯ ಅಮೆರಿಕನ್ನರ ನೇಮಕಾತಿಯನ್ನು ಉಲ್ಲೇಖಿಸಿ ಹೀಗೆ ಹೇಳಿದ್ದಾರೆ.
ಅಧಿಕಾರಕ್ಕೆ ಬಂದು ಕೇವಲ 50 ದಿನಗಳೊಳಗಾಗಿ ಬೈಡನ್ ತಮ್ಮ ಆಡಳಿತದ ಪ್ರಮುಖ ಹುದ್ದೆಗಳಿಗೆ 55 ಭಾರತೀಯ ಅಮೆರಿಕನ್ನರನ್ನು ನೇಮಿಸಿಕೊಂಡಿದ್ದಾರೆ. ಅವರ ಭಾಷಣ ಬರಹಗಾರರಿಂದಾದಿಯಾಗಿ ನಾಸಾದ ಪ್ರಮುಖ ಹುದ್ದೆಗಳಿಗೆ ಭಾರತೀಯ ಅಮೆರಿಕನ್ನರನ್ನು ಬೈಡನ್ ನೇಮಿಸಿಕೊಂಡಿದ್ದಾರೆ ಎನ್ನುವುದು ವಿಶೇಷ.
ಓದಿ : ಶೀಘ್ರದಲ್ಲೇ ಕಡಿಮೆ ದರದ ‘ಜಿಯೋ’ ಲಾಪ್‍ಟಾಪ್ ಮಾರುಕಟ್ಟೆಗೆ ಲಗ್ಗೆ..!
ಭಾರತೀಯ ಮೂಲದ ಅಮೆರಿಕನ್ನರು ಅಮೆರಿಕಾದ ಹಿಡಿದ ಸಾಧಿಸುತ್ತಿದ್ದಾರೆ. ನೀವು (ಸ್ವಾತಿ ಮೋಹನ್,ಏರೋ ಸ್ಪೇಸ್ ಇಂಜಿನಿಯರ್, ಮಾರ್ಸ್ ರೋವರ್ ಮಿಷನ್ ನನ್ನು ಯಶಸ್ವಿಯಾಗಿ ಇಳಿಸಿದ ಭಾರತ ಮೂಲದ ಮಹಿಳೆ) , ಉಪಾಧ್ಯಕ್ಷೆ ಕಮಲ ಹ್ಯಾರಿಸ್, ನನ್ನ ಭಾಷಣ ಬರಹಗಾರ(ವಿನಯ್ ರೆಡ್ಡಿ) ಎಂದು ಮಂಗಳ ಗ್ರಹಕ್ಕೆ ಇಳಿದ ಪರ್ಸೆವರೆನ್ಸ್ ಮಿಷನ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ನಾಸಾ ವಿಜ್ಞಾನಿಗಳೊಂದಿಗೆ ನಡೆದ ವರ್ಚುವಲ್ ಸಂವಾದದಲ್ಲಿ ಬೈಡನ್ ಹೇಳಿದ್ದಾರೆ.
ಭಾರತ ಮೂಲದ ಅಮೆರಿಕಾದ ನಾಸಾ ವಿಜ್ಞಾನಿ ಸ್ವಾತಿ ಮೋಹನ್, ನಾಸಾದ ಮಾರ್ಸ್ 2020 ಮಿಷನ್ ನ ನೇತೃತ್ವವನ್ನು ವಹಿಸಿದ್ದರು.
ಓದಿ : ಪಶ್ಚಿಮ ಬಂಗಾಳ : ನಂದಿಗ್ರಾಮ ಕ್ಷೇತ್ರದಲ್ಲಿ ಬ್ಯಾನರ್ಜಿ v/s ಸುವೇಂದು ಅಧಿಕಾರಿ..!?