Advertisement

1 ಲಕ್ಷ ಜಿಯೋಪಾರ್ಡಿ ಚಾಂಪ್ಯನ್‌ಶಿಪ್‌ ಗೆದ್ದ ಭಾರತೀಯ ಅಮೆರಿಕನ್‌

11:33 AM Apr 21, 2018 | udayavani editorial |

ನ್ಯೂಯಾರ್ಕ್‌ : ಐವಿ ಲೀಗ್‌ ಬ್ರೌನ್‌ ಯುನಿವರ್ಸಿಟಿಯಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿರುವ ಧ್ರುವ ಗೌರ್‌ ಅವರು ದೇಶಾದ್ಯಂತ ಪ್ರಸಾರಿತವಾದ ಒಂದು ಲಕ್ಷ ಡಾಲರ್‌ ಬಹುಮಾನದ ಪ್ರತಿಷ್ಠಿತ  ಜಿಯೋಪಾರ್ಡಿ ಕಾಲೇಜ್‌ ಚಾಂಪ್ಯನ್‌ಶಿಪ್‌ ಗೆದ್ದು ಸುದ್ದಿಯಾಗಿದ್ದಾರೆ.

Advertisement

ನಿನ್ನೆಯಷ್ಟೇ ಸಮಾಪನಗೊಂಡಿದ್ದ ಈ ಸ್ಪರ್ಧೆಯಲ್ಲಿ ಧ್ರುವ ಗೌರ್‌ ಅವರು ಇತರ 14 ಮಂದಿ ವಿದ್ಯಾರ್ಥಿಗಳ ಕಠಿನ ಸ್ಪರ್ಧೆಯನ್ನು ಎದುರಿಸಿ ಗ್ರ್ಯಾಂಡ್‌ ಪ್ರೈಜ್‌ ಗೆದ್ದುಕೊಂಡರು. 

ಒಂದು ಲಕ್ಷ ಡಾಲರ್‌ ಬಹುಮಾನದ ಜಿಯೋಪಾರ್ಡಿ ಕಾಲೇಜ್‌ ಚ್ಯಾಂಪನ್‌ಶಿಪ್‌ ಗೆಲ್ಲುವ ಮೂಲಕ ಧ್ರುವ ಗೌರ್‌ ಅವರು ಮುಂದಿನ ಆವೃತ್ತಿಯ ಟೂರ್ನ್ಮೆಂಟ್‌ ಚಾಂಪ್ಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಸ್ಥಾನ ಪಡೆದಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next